ಸಿಂದಗಿ: ಇಂದು ಅನೇಕ ಬ್ಯಾಂಕುಗಳು ಹುಟ್ಟುವ ಮುನ್ನವೇ ಮುಚ್ಚಿ ಹೋದ ಅನೇಕ ನಿದರ್ಶನಗಳ ಮಧ್ಯೆ ೨೦ ವರ್ಷಗಳಿಂದ ತನ್ನ ಅಸ್ಥಿತವನ್ನು ಉಳಿಸಿಕೊಂಡು ಸಮಾಜಕ್ಕೆ ಆರೋಗ್ಯಕರ ಸೇವೆ ನೀಡುತ್ತಿರುವ ಶ್ರೀ ಹಡಪದ ಅಪ್ಪಣ್ಣ ವಿವಿದ್ದೋದೇಶಗಳ ಸಹಕಾರಿ ಸಂಘ ನಿಯಮಿತದ ನೂತನ ಕಟ್ಟಡ ನಿರ್ಮಿಸಿಕೊಳ್ಳುತ್ತಿರುವುದು ಹರ್ಷ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿದ್ದೋದೇಶಗಳ ಸಹಕಾರಿ ಸಂಘ ನಿಯಮಿತ ಸಿಂದಗಿ ನಮ್ಮ ಸಂಘದ ನೂತನ ಕಟ್ಟಡದ ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದರು.
ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಷ. ಬ್ರ.ಶ್ರೀ ಸಿದ್ದಲಿಂಗ ಶಿವಾಚಾರ್ಯರು ಹಾಗೂ ಮುಖ್ಯ ಅತಿಥಿಗಳಾಗಿದ್ದ ಎಮ್ .ಎಸ್. ರಾಠೋಡ ಈ ಸಭೆಯ ಅಧ್ಯಕ್ಷತೆ ವಹಿಸಿದ ವಿಜಯಪುರ ಶ್ರೀ ಹಡಪದ ಅಪ್ಪಣ್ಣ ಸಹಕಾರಿ ಸಂಘದ ಅಧ್ಯಕ್ಷ ನಿಂಗಣ್ಣ. ಅ.ನಾವಿ, ಶ್ರೀ ಹಡಪದ ಅಪ್ಪಣ್ಣ ಸಮಾಜದ ತಾಲೂಕ ಅಧ್ಯಕ್ಷ ಮಹಾಂತೇಶ ಮೂಲಿಮನಿ, ನಿವೃತ್ತ ಶಿಕ್ಷಕ ಶಿವಪಾದಯ್ಯ ಹಿರೇಮಠ, ಗುರಣ್ಣ ಶಾಹಪುರ, ಪ್ರಥಮ ಗುತ್ತಿಗೆದಾರ ಶುಭಾಶ ಕಾಳೆ. ಎನ್.ಬಿ.ಪಾಟೀಲ. ಸಂಘದ ಅಧ್ಯಕ್ಷ ಭಾಗಣ್ಣ ಜಟ್ಟೆಪ್ಪ ಹಡಪದ ಉಪಾಧ್ಯಕ್ಷ ಶಿವಶರಣ ದುಂಡಪ್ಪ ಸಿಂದಗಿ, ಜೆಟ್ಟೆಪ್ಪ.ಸಿ. ಹಡಪದ, ಚಿದಾನಂದ ಶಾಸ್ತ್ರಿ, ಗ್ರಾಮ ಪಂಚಾಯತ್ ಸದಸ್ಯ ಕಾಶಿನಾಥ ಎಸ್.ನಾವಿ, ಶಿವಾನಂದ ವಾಲಿಕಾರ, ಮಾಜಿ ಸೈನಿಕ ರೆಚ್ಚಣ್ಣ ಗೋಲಗೇರಿ, ನಿರ್ದೇಶಕರಾದ ಪ್ರವೀಣ ಜಿ ಹಡಪದ, ಸಿದ್ರಾಮಪ್ಪ ನಿ ಹಡಪದ, ತೌಹೀದ್ ಶ ಮಳ್ಳಿಕರ, ಚಂದ್ರಕಾಂತ ಶಿ ಮಾದರ, ಶ್ರೀಮತಿ ಲಕ್ಷ್ಮೀಬಾಯಿ ದು ಸಿಂದಗಿ, ಬಸಮ್ಮ ಜೆ ಹಡಪದ, ನಿರ್ಮಲಾ ರೇ ಗೋಲಗೇರಿ, ಸುನಂದಾ ತೀ ಹಡಪದ, ಕಾವೇರಿ ಶೇ ಹಡಪದ, ಮೀನಾಕ್ಷಿ ಸಿ ಅಸ್ಕಿ , ಸುಧಾರಣಿ ಅ ಕರ್ನಾಳ, ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಮಲ್ಲಪ್ಪ ಮಡಿವಾಳಪ್ಪ ಹಳಿಮನಿ (ಹಡಪದ) ಹಾಗೂ ಸಿಬ್ಬಂದಿ ವರ್ಗ ಮತ್ತು ಪಿಗ್ಮಿ ಏಜೆಂಟರು ಉಪಸಿತರಿದ್ದರು