Homeಸುದ್ದಿಗಳುಸ್ಮಶಾನ ಕಂಪೌಂಡ್ ಕಾಮಗಾರಿಗೆ ಪೂಜೆ ನೆರವೇರಿಸಿದ ಶಾಸಕ

ಸ್ಮಶಾನ ಕಂಪೌಂಡ್ ಕಾಮಗಾರಿಗೆ ಪೂಜೆ ನೆರವೇರಿಸಿದ ಶಾಸಕ

ಸಿಂದಗಿ: ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಪ್ರತಿಯೊಂದು ಜನಾಂಗಕ್ಕೆ ನನ್ನ ಈ ಒಂದು ವರ್ಷದ ಅಲ್ಪ ಅವಧಿಯಲ್ಲಿ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ  ನನ್ನ ಮತ ಕ್ಷೇತ್ರದಲ್ಲಿ ಯಾವುದೇ ರೀತಿಯ ಜಾತಿಯ ಭೇದಭಾವ ಇರಬಾರದು ನನ್ನ ಮತಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದು ಶಾಸಕ ರಮೇಶ ಭೂಸನೂರ  ಹೇಳಿದರು.

ತಾಲೂಕಿನ ಕೊಕಟನೂರ ಗ್ರಾಮದಲ್ಲಿ, ಹಜ್ ಮತ್ತು ವಕ್ಪ ಇಲಾಖೆಯ ವತಿಯಿಂದ ಮಂಜೂರಾದ, ಕೊಕಟನೂರ ಮುಸ್ಲಿಂ ಸ್ಮಶಾನದಲ್ಲಿ (ಕಬ್ರಸ್ಥಾನ) ಸುಮಾರು 10 ಲಕ್ಷ ಅಂದಾಜು ಮೊತ್ತದಲ್ಲಿ ಕಂಪೌಂಡ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಕಾರ್ಯಕ್ರಮವನ್ನೂ ಉದ್ದೇಶಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಸಮಸ್ತ ಮುಸ್ಲಿಂ ಬಾಂಧವರು,ಊರಿನ ಹಿರಿಯರಾದ, ಅಣ್ಣುಗೌಡ ಪಾಟೀಲ, ಶಂಕ್ರಯ್ಯಾ ಮಠ, ಎಸ್.ಕೆ.ಪೂಜಾರಿ, ಜೆಟ್ಟೆಪ್ಪಾ ಹರನಾಳ,ಇಸ್ಲಾಂ ಕಮೀಟಿ ಅಧ್ಯಕ್ಷರಾದ ಮೈನುದ್ದಿನ ಕುಮಸಗಿ,ರತ್ನಪ್ಪ ಘತ್ತರಗಿ, ಗ್ರಾ.ಪಂ ಅಧ್ಯಕ್ಷ ಪೈಗಂಬರ ಮುಲ್ಲಾ,ಗ್ರಾ.ಪಂ. ಉಪಾಧ್ಯಕ್ಷ ರಮೇಶ ಚಿನ್ನಾಕರ, ಮಾಜಿ ಜಿ.ಪಂ.ಸದಸ್ಯ ಯಲ್ಪಪ್ಪ ಹಾದಿಮನಿ,ಗ್ರಾ.ಪಂ.ಮಾಜಿ ಅಧ್ಯಕ್ಷ ಹುವಪ್ಪ ಕನ್ನೂರ,ಇಸಾಕ ಮುಲ್ಲಾ, ಅಣ್ಣಪ್ಪ ಬೊಮ್ಮನಳ್ಳಿ, ಬಸು ಹರನಾಳ, ಎಸ್,ಎಮ್.ಮಠ,ರಾಜು ಗೌಂಡಿ, ಬಾಬು ರಾಠೂಡ,ಬೀರಪ್ಪ ಕನ್ನೂರ,ಇರ್ಫಾನ್ ಮುಲ್ಲಾ,ಕಾಂತು ಬ್ಯಾಕೋಡ,ಪ್ರಕಾಶ ಹರಿಜನ,ಬಸು ಹಂದ್ರಾಳ, ಕಿರಿಯರು,ಗಣ್ಯರು,ಪಕ್ಷದ ಮುಖಂಡರು, ಕಾರ್ಯಕರ್ತರು, ಯುವಕರು, ಉಪಸ್ಥಿತರಿದ್ದರು

RELATED ARTICLES

Most Popular

error: Content is protected !!
Join WhatsApp Group