spot_img
spot_img

ಸಿದ್ದಣ್ಣ ದುರದುಂಡಿಗೆ ಯುವ ಪ್ರಶಸ್ತಿ

Must Read

- Advertisement -

ಮೂಡಲಗಿ: ತಾಲ್ಲೂಕಿನ ಹಳ್ಳೂರದ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಯುವ ಸಂಘಟಕ ಸಿದ್ದಣ್ಣ ದುರದುಂಡಿ ಅವರಿಗೆ ಭಾರತ ಸರ್ಕಾರ ನೆಹರು ಯುವ ಕೇಂದ್ರ ಬೆಳಗಾವಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ 2022 – 23  ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಸಾಂಘಿಕ ಯುವ ಪ್ರಶಸ್ತಿಯನ್ನು  ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಸಮಾಜ ಸೇವಕ ಸಿದ್ದಣ್ಣ ದುರದುಂಡಿ ಅವರು ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘವನ್ನು ಹುಟ್ಟು ಹಾಕಿ ಅದರ ಮುಖಾಂತರ ಜಾನಪದ ಕಲೆ, ಕ್ರೀಡೆ, ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ, ಸ್ವಚ್ಛ ಭಾರತ ಜನ ಜಾಗೃತಿ, ಪರಿಸರ ನಿರ್ಮಾಣ, ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ, ಮಹಿಳಾ ಸಬಲೀಕರಣ, ಸಾಮಾಜಿಕ ಪಿಡುಗುಗಳ ಕುರಿತು ಜನಜಾಗೃತಿ ಕಾರ್ಯಕ್ರಮಗಳು, ಹತ್ತು ಹಲವಾರು ಜನ ಜಾಗೃತಿ ಕಾರ್ಯಕ್ರಮಗಳು, ಮುಖ್ಯವಾಗಿ ಯುವ ಚಟುವಟಿಕೆಗಳು, ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ ಆಗದಂತೆ ಜನರಲ್ಲಿ ಜಾಗೃತಿ ಮೂಡಿಸುವಂಥ ಕಾರ್ಯಗಳನ್ನು ಮಾಡಿದ್ದಾರೆ.

ಯುವ ಸಂಘಟನೆ ಮಾಡುವ ಮೂಲಕ 15 ವರ್ಷಗಳಿಂದ ನಿಸ್ಸಾರ್ಥ ಸೇವೆ ಮಾಡುತ್ತಾ ಬಂದಿರುವ ಸಂಘಟನೆಯ ಸರದಾರ ಎಂಬ ಬಿರುದು ಪಡೆದಿರುವ ಸಿದ್ದಣ್ಣ ದುರದುಂಡಿ ಅವರು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಿರಂತರ ಸಂಘಟನೆ ಮಾಡುತ್ತಾ ಗ್ರಾಮೀಣ ಭಾಗದ ಯುವಕರಿಗೆ ಮಾದರಿಯಾಗಿರುವ ಸಿದ್ದಣ್ಣ ದುರದುಂಡಿ ಅವರ ಅನುಪಮ ಸೇವೆಯನ್ನು ಗುರುತಿಸಿ ಬೆಳಗಾವಿ ಸರ್ ಎಂ ವಿಶ್ವೇಶ್ವರಯ್ಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಭಾರತ ಸರ್ಕಾರದ ಜಿಲ್ಲಾ ಮಟ್ಟದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮದಲ್ಲಿ ಬೆಳಗಾವಿ ಲೋಕಸಭಾ ಸದಸ್ಯೆ ಮಂಗಳ ಅಂಗಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ರಂಗಸ್ವಾಮಿ ಹಾಗೂ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಜಿಲ್ಲಾ ಯುವ ಅಧಿಕಾರಿ ರೋಹಿತ ಕಲರಾ ಅವರು ಸಿದ್ದಣ್ಣ ದುರದುಂಡಿ ಅವರಿಗೆ ಜಿಲ್ಲಾ ಮಟ್ಟದ ಯುವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group