ಹಳ್ಳೂರ : ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ನಿಜವಾದ ಪಂಚ ಯೋಜನೆಗಳ ಯಶಸ್ವಿಯೊಂದಿಗೆ ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಕಂಕಣ ಬದ್ಧವಾಗಿ ಹಲವಾರು ಯೋಜನೆ ಗಳನ್ನು ಜಾರಿಗೆ ತಂದಿದೆ.
ನಾನು ನಿಮ್ಮ ಆಶೀರ್ವಾದದಿಂದ ಕುಡಚಿ ಕ್ಷೇತ್ರದ ಸೇವಕನಾಗಿರುವ ದಿಟ್ಟತನದಿಂದ ಗಟ್ಟಿಯಾಗಿ ನಿಂತು ನಿಮ್ಮ ಸೇವೆ ಮಾಡುವೆ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಅವರು ರವಿವಾರ 17 ರಂದು ಮುಗಳಖೋಡ ಪಟ್ಟಣದ ನಿರಲಕೋಡಿ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ನೀರಾವರಿ Pro, 2024-25 4071 ವಿಶೇಷ ಘಟಕ ಲೆಕ್ಕ ಶಿರ್ಷಿಕೆಯಡಿ ಅನುಮೋದನೆಗೊಂಡ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಪಟ್ಟಣದ (1) ಜಿಎಲ್‌ಬಿಸಿ ಮುಖ್ಯ ಕಾಲುವೆಯ ಸರಪಳಿ ನಂ-45ರಲ್ಲಿ ಎಸ್ಕೆಪ್ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡುವುದು ಅಂದಾಜು ಮೊತ್ತ = 400 ಲಕ್ಷಗಳು (2) ಜಿಎಲ್‌ಬಿಸಿ ಮುಖ್ಯ ಕಾಲು ವೆಯ ಸರಪಳಿ ನಂ-48+850 ರಲ್ಲಿ ಬರುವ ಮುಗಳಖೋಡ ವಿತರಣಾ ಕಾಲುವೆಯ (ಕಿ.ಮಿ. 2 ರಿಂದ 11 ರ ವರೆಗೆ) ಸಿಸಿ ಲೈನಿಂಗ್ ಸೇವಾರಸ್ತೆ ಮತ್ತು ಸಿಟಿಸಿಗಳ ಸುಧಾರಣೆ ಅಂದಾಜು ಮೊತ್ತ 300 ಲಕ್ಷಗಳು ಒಟ್ಟು ಏಳು ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ, ಹಿಂದಿನ ಬಿಜೆಪಿ ಸರ್ಕಾರ ಸದೃಢ ಆರ್ಥಿಕ ವ್ಯವಸ್ಥೆ ಇಲ್ಲದೆ ಲಕ್ಷ ಕೋಟಿ ಗಿಂತ ಹೆಚ್ಚುಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರದೆ ಪರಿತಪಿಸಿ ಹೋದರು. ಇಂದು ನಾವು ನುಡಿದಂತೆ ನಡೆದು ಸದೃಢ ಆರ್ಥಿಕ ವ್ಯವಸ್ಥೆಯಿಂದ ನಾಡಿನ ಜನತೆಯ ನಾಡಿ ಮಿಡಿತ ಅರೆತು ಯಶಸ್ವಿಯಾಗಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು
ಇದನ್ನು ಸಹಿಸದ ಬಿಜೆಪಿಯ ಸಾಮಾಜಿಕ ಜಾಲ ತಾಣಗಳ ಕಿಡಿಗೇಡಿಗಳು ಇವು ನಮ್ಮ ಯೋಜನೆಗಳು ಎಂದು ಪ್ರಚಾರಕ್ಕೆ ನಿಂತಿದ್ದಾರೆ. ದಿಟ್ಟತನದಿಂದ ನಿಮ್ಮ ಸೇವೆಗೆ ಸದಾ ಕಾಲ ಸಿದ್ಧನಾಗಿರುವ ನೀವು ಗಟ್ಟಿತ ನದಿಂದ ಜಾಗೃತರಾಗಿ, ಯಾವುದೇ ಹೊತ್ತು ಜಯ ನಮ್ಮದಾಗಿಸಿಕೊಂಡು ಒಟ್ಟಾಗಿ ಸಾಗೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಾ ಆ ಕಾ ರಾ ಉಪಾಧ್ಯಕ್ಷ ಚಂದ್ರು ಕುಲಿಗೋಡ, ಪುರಸಭೆ ಸದಸ್ಯ ಪರಪ್ಪ ಬೆತಗೌಡರ, ರಮೇಶ ಯಡವಣ್ಣವರ, ಪರುಶುರಾಮ ಕಟಕೋಳ, ಮಹಾವೀರ ಕುರಾಡೆ, ಮುಖಂಡ ಶ್ರೀಶೈಲ ಅಂಗಡಿ, ನಾಮನಿರ್ದೇಶಿತ ಸದಸ್ಯರಾದ ಗಂಗಪ್ಪ ಗೋಕಾಕ, ಅಶೋಕ ಕದಮ, ಅಶೋಕ ಹಳಿಂಗಳಿ,ಹಣಮಾಸಾಹೇಬ ನಾಯಿಕ, ಕುಡಚಿ ಕ್ಷೇತ್ರದ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಮಲ್ಲಪ್ಪ ಅಂಗಡಿ, ರಮೇಶ ನಾಶಿ, ಲಕ್ಷಣ ಹೊಸಟ್ಟಿ.ತಮ್ಮಣ್ಣ ಪಾಟೀಲ, ಈರಪ್ಪ ಅಂಗಡಿ, ಮಲ್ಲಪ್ಪ ಕುಳಲಿ, ಯುಗ ರಮೇಶ ಕಾಪಶಿ, ರೇವಪ್ಪ ದೊಡಮನಿಯ ನೀರಾವರಿ ಇಲಾಖೆಯ ಅಭಿಯಂತರಾದ ಎಚ್ ಎಲ್ ಪೂಜೆರಿ, ಭೀಮಪ್ಪ ಅಂಗಡಿ ಹಾಗೂ ಕಾರ್ಯ ಕರ್ತರು ಇತರರು ಇದ್ದರು.
ಸ್ಥಳೀಯ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ 21 ನೇ ವಾರ್ಡಿನ ಹಾಗೂ ಬಿಜೆಪಿ ಆಡಳಿತದ ಸದಸ್ಯರು ಹಾಗೂ ಮುಖ್ಯಾಧಿಕಾರಿ, ಸಿಬ್ಬಂದಿಗಳ ಅನುಪಸ್ಥಿತಿ ಜನರ ಮಾತಿಗೆ ಆಹಾರವಾಯಿತು.
ಸಂತೋಷ ಅರಭಾವಿ ಸ್ವಾಗತಿಸಿ. ಮುರಿಗೆಪ್ಪ ಮಾಲಗಾರ ನಿರೂಪಿಸಿ. ಶ್ರೀಶೈಲ ಅಂಗಡಿ ವಂದಿಸಿದರು.

