ದೇಶದ ಬೆನ್ನೆಲುಬು ರೈತನಿಗೆ ಕೊಡಲಿಪೆಟ್ಟು ; ಕರೋನಾದಿಂದ ಬಸವಳಿದ ರೈತನ ಅಕಾಲಿಕ ಮಳೆ ಮೂಲೆಗುಂಪು ಮಾಡಿತೇ?

Must Read

ಸಿಂದಗಿ: ರೈತ ನಕ್ಕರೆ ಇಡೀ ನಾಡೇ ಖುಷಿ ಪಡುತ್ತದೆ. ರೈತ ಬಿಕ್ಕಿದರೆ ಇಡೀ ದೇಶಕ್ಕೇ ವಿನಾಶ ಕಾಲ ಬಂದಂತೆ, ರೈತ ದೇಶದ ಬೆನ್ನೆಲುಬು ಎನ್ನುವ ಮಾತಿಗೆ ಕೊಡಲಿಪೆಟ್ಟು ಎಂಬಂತೆ ಇತ್ತೀಚಿಗೆ ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ ತಾಲೂಕಿನಲ್ಲಿ 1435 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ದ್ರಾಕ್ಷಿ ಬೆಳೆ ಸಂಪೂರ್ಣ ಹಾನಿಯಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರನ್ನು ಮೂಲೆಗುಂಪು ಮಾಡಿದಂತಾಗಿದೆ.

ಹೌದು, ಕಳೆದ 2 ವರ್ಷದಿಂದ ಕರೋನಾ 1, 2 ಅಲೆಯಿಂದ ತತ್ತರಿಸಿ ರೈತನು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ಬಸವಳಿದ ರೈತರಿಗೆ ಸದ್ಯ ಮತ್ತೆ ರಾಜ್ಯಾದ್ಯಂತ ಅಕಾಲಿಕವಾಗಿ ಸುರಿದ ಮಳೆಯಿಂದ ಈ ಅಖಂಡ ತಾಲೂಕಾದ್ಯಂತ ದ್ರಾಕ್ಷಿ ಬೆಳೆ ಸಂಪೂರ್ಣ ಹಾನಿಯಾಗಿ ರೈತರ ಗೋಳು ಹೇಳತೀರದಾಗಿದೆ.

ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಸ್ಯರೋಗ ತಜ್ಞ ಡಾ. ಎಸ್.ಎಂ.ವಸದ, ಕೀಟ ತಜ್ಞ ಡಾ. ಎಸ್.ಎಸ್. ಕರಬಂಟನಾಳ, ಬೇಸಾಯ ತಜ್ಞ ಎಸ್.ಬಿ.ಪಾಟೀಲ, ತಳಿ ವರ್ಧಕರಾದ ಡಾ. ಎಂ.ಡಿ. ಪಾಟೀಲ, ಕೃಷಿ ಇಲಾಖೆ ಜಂಟಿ ಕೃಷಿನಿರ್ದೇಶಕ ಡಾ.ಪಿಲಿಯಮ ರಾಜಶೇಖರ, ಇಂಡಿ ಉಪ ಕೃಷಿ ನಿರ್ದೇಶಕ ಡಾ. ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿರ್ದೇಶಕ ಡಾ| ಎಚ್.ವೈ. ಸಿಂಗೆಗೋಳ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಚಿದಾನಂದ ಬೂದಿಹಾಳ, ವಿ.ಬಿ.ಕಟ್ಟಿ ಅವರು ಕೃಷಿ ಮತ್ತು ಹಾನಿಯಾಗಿರುವ ತೋಟಗಾರಿಕೆ ಬೆಳೆ ವೈಜ್ಞಾನಿಕವಾಗಿ ಸರ್ವೇ ಕಾರ್ಯ ಕೈಗೊಂಡು ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ವರದಿಯನ್ನು ಸರಕಾರ ಎಷ್ಟರಮಟ್ಟಿಗೆ ಪರಿಗಣನೆಗೆ ತೆಗೆದುಕೊಂಡು ಪರಿಹಾರ ದೊರಕಿಸಿಕೊಡುತ್ತದೆ ಎಂಬುದು ರೈತರಲ್ಲಿ ಅಳಕು ಹುಟ್ಟಿಸಿದೆ.


ಸಿಂದಗಿ ಮತ್ತು ಆಲಮೇಲ ತಾಲೂಕಿನಲ್ಲಿ 792 – ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ 25 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ 1.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 18.29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಅಕಾಲಿಕ ಮಳೆಯಿಂದ ತೊಗರಿ, ಹತ್ತಿ, ಉಳ್ಳಾಗಡ್ಡಿ ಸೇರಿದಂತೆ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ವೈಜ್ಞಾನಿಕವಾಗಿ ಸರ್ವೇ ಕಾರ್ಯ ಕೈಗೊಂಡು ಸಮೀಕ್ಷೆ ನಡೆಸಲಾಗಿದೆ. ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ.

ರಮೇಶ ಭೂಸನೂರ
ಶಾಸಕರು ಸಿಂದಗಿ ಮತಕ್ಷೇತ್ರ.
ಆಗ್ರಹ;


ತಾಲೂಕಿನಾದ್ಯಂತ ಅಕಾಲಿಕವಾಗಿ ಸುರಿದ ಮಳೆಯಿಂದ ದ್ರಾಕ್ಷಿ, ಮೆಣಸಿನಕಾಯಿ, ತೊಗರಿ, ಹತ್ತಿ ಸೇರಿದಂತೆ ಅನೇಕ ತೋಟಗಾರಿಕೆ ಹಾಗೂ ಒಣಬೇಸಾಯ ಬೆಳೆಗಳು ಅಪಾರ ಹಾನಿಯಾಗಿದ್ದು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು, ತೋಟಗಾರಿಕಾ ಸಚಿವರು, ಕೃಷಿ ಸಚಿವರು ಜಂಟಿಯಾಗಿ ಸರ್ವೇ ಮಾಡಿ ವಿಶೇಷವಾಗಿ ಈ ಭಾಗದ ದ್ರಾಕ್ಷಿ ಹಾಗೂ ಮೆಣಸಿನಕಾಯಿ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು.

ಅಶೋಕ ಮನಗೂಳಿ
ಕಾಂಗ್ರೆಸ್ ಮುಖಂಡ


ಸಿಂದಗಿ, ದೇವರಹಿಪ್ಪರಗಿ, ಆಲಮೇಲ ತಾಲೂಕಿನಲ್ಲಿ 1435 ಹೆಕ್ಟೆರ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು ಇತ್ತೀಚೆಗೆ ತಾಲೂಕಿನಲ್ಲಿ ಸುರಿದ ಮಳೆಯಿಂದ ಹಾನಿಗೊಳಗಾದ 22 ಪ್ಲಾಟ್‍ಗಳ ಸಮೀಕ್ಷೆ ನಡೆಸಲಾಗಿದ್ದು ಇದರಲ್ಲಿ ಬಾಗಶಃ ಪ್ರತಿಶತ 80ರಿಂದ 85 ರಷ್ಟು ಹಾನಿಯಾಗಿದೆ ಎಂದು ನ. 25 ರಂದು ಜಿಲ್ಲಾ ತೋಟಗಾರಿಕೆ, ಕೃಷಿ ತಜ್ಞರು ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ ಅದು ಸರಕಾರ ಮಟ್ಟದಲ್ಲಿ ಚರ್ಚೆಗೆ ಅವಕಾಶ ಸಿಗಲಿದೆ.

ರಾಘವೇಂದ್ರ ಬಗಲಿ
ಹಿರಿಯ ಸಹಾಯಕ ತೋಟಗಾರಿಕಾಧಿಕಾರಿ ಸಿಂದಗಿ.


ಕೃಷಿ ವಿಜ್ಞಾನಿಗಳ ಮತ್ತು ಅಧಿಕಾರಿಗಳ ತಂಡ ಕ್ಷೇತ್ರದಲ್ಲಿ ಸಂಚರಿಸಿದ್ದು ತೊಗರಿ, ಹತ್ತಿ ಮುಂತಾದ ಬೆಳೆಗಳ ಹಾನಿ ಬಗ್ಗೆ ವೀಕ್ಷಣೆ ಮಾಡಿದ್ದಾರೆ. ಮಳೆಯಿಂದ ಸಂಪೂರ್ಣ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಇಲ್ಲಿ ಈಗ ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದ್ದು, ನಿರಂತರ ಮಳೆಯಿಂದ ಇಲ್ಲಿ ಹೂವು ಮತ್ತುಕಾಯಿ ಕೊಳೆತು ಹೋಗಿದೆ, ದ್ರಾಕ್ಷಿ ಬೆಳೆ ಹಾನಿಯಿಂದ ಕಂಗಾಲಾಗಿರುವ ರೈತರು ಪರಿಹಾರಕ್ಕಾಗಿ ಇಲಾಖೆ ಮೊರೆ ಹೋಗುವಂತಾಗಿದೆ

ದಾದಾಪೀರ ಯಾಳಗಿ, ರಂಜಾನಸಾಬ ದುಮ್ಮದರಿ
ಪ್ರಗತಿಪರ ಸ್ಥಳಿಯ ರೈತರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group