Homeಸುದ್ದಿಗಳುಮಾದರಿ ಕರ್ನಾಟಕದ ಹೊಸ ಹೆಜ್ಜೆಯ  ಬಜೆಟ್ - ಅಶೋಕ ಮನಗೂಳಿ

ಮಾದರಿ ಕರ್ನಾಟಕದ ಹೊಸ ಹೆಜ್ಜೆಯ  ಬಜೆಟ್ – ಅಶೋಕ ಮನಗೂಳಿ

ಸಿಂದಗಿ– ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ರಾಜ್ಯದ ಜನತೆಗೆ ತೃಪ್ತಿ ತಂದಿದೆ. ಇದೊಂದು ಕರ್ನಾಟಕದ ಮಾದರಿ ಅಭಿವೃದ್ದಿಯ ಹೊಸ ಹೆಜ್ಜೆಯ ಬಜೆಟ್ ಆಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ನಮ್ಮ ತಂದೆ ದಿ.ಎಂ.ಸಿ.ಮನಗೂಳಿ ಅವರ ಕನಸಿನ ಕೂಸಾಗಿರುವ ಆಲಮೇಲದಲ್ಲಿ ತೋಟಗಾರಿಕೆ ಮಹಾವಿದ್ಯಾಲಯವು ಇಂದಿನ ಬಜೆಟ್ ನಲ್ಲಿ ಘೋಷಣೆಯಾಗಿದೆ. ಇದು ನಮ್ಮ ತಾಲೂಕಿನ ಜನತೆಗೆ ಸಂತಸ ತಂದ ವಿಚಾರವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಜಿಲ್ಲಾ ಉಸ್ತುವಾರಿ ಸಚಿವ  ಎಂ. ಬಿ ಪಾಟೀಲ್, ಸಚಿವ ಶಿವಾನಂದ ಪಾಟೀಲ್ ಅವರಿಗೆ  ಕ್ಷೇತ್ರದ ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಎಂದು ಅವರು ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಬೃಹತ ಆಗಿರುವ ೫ ಗ್ಯಾರಂಟಿಗಳ ಮಧ್ಯದಲ್ಲಿಯೂ ಕೃಷಿ, ಸಾಮಾಜಿಕ, ಹೈನುಗಾರಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ನೀರಾವರಿ, ಮೂಲಭೂತ ಸೌಕರ‍್ಯ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಪರಿಗಣನೆಗೆ ತಗೆದುಕೊಂಡು ಎಲ್ಲ ಕ್ಷೇತ್ರಗಳ ಅಭಿವೃದ್ದಿ ಮುಖ್ಯಮಂತ್ರಿಗಳು ಬಜೆಟ್ ದಲ್ಲಿ ಹಣ ಮೀಸಲಿರಿಸಿದ್ದಾರೆ. ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲ ಸಮುದಾಯಕ್ಕು ಪ್ರಾತಿನಿಧ್ಯವನ್ನು ನೀಡಿ ರಾಜ್ಯದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ವಿಶೇಷವಾಗಿ ವಿಜಯಪುರ ಜಿಲ್ಲೆಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಿದ್ದು ಜಿಲ್ಲೆಯ ಜನತೆಯ ಪರವಾಗಿ ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕರು ಹೇಳಿದರು

RELATED ARTICLES

Most Popular

error: Content is protected !!
Join WhatsApp Group