ನಿನ್ನೆ ತಾನೆ ಗುಜರಾತ್ ನ ಅಹಮದಾಬಾದ್ ನಲ್ಲಿ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾದರಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಭಾಷಣಕ್ಕೆ ಧ್ವನಿ ವರ್ಧಕ ಬಳಸಬಾರದೆಂಬ ನಿಯಮ ಪಾಲಿಸಿ ಮಾದರಿ ನಡೆ ಪ್ರದರ್ಶಿಸಿದ್ದಾರೆ
ಅದಕ್ಕಾಗಿ ಅವರು ಜನತೆಯ ಕ್ಷಮೆಯನ್ನೂ ಕೇಳಿದ್ದು ರಾತ್ರಿ ಹತ್ತರ ನಂತರ ಧ್ವನಿವರ್ಧಕ ಬಳಸಲು ಆತ್ಮ ಒಪ್ಪದು ಎನ್ನುತ್ತ ಧ್ವನಿವರ್ಧಕ ಇಲ್ಲದೆ ಮಾತನಾಡದರಲ್ಲದೆ ಅದಾದ ಮೇಲೆ ಜನತೆಗೆ ಸಾಷ್ಟಾಂಗ ಹಾಕಿದರು.
ನಾನು ಬರುವುದೇ ತಡವಾಯಿತು. ಆದರೂ ರಾತ್ರಿ ಮೈಕ್ ಬಳಸಲು ಆತ್ಮ ಒಪ್ಪುವುದಿಲ್ಲ ನಾವು ನಿಯಮಗಳನ್ನು ಪಾಲಿಸಲು ಬದ್ಧರಾಗಿರಬೇಕು ಎಂದರಲ್ಲದೆ, ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂತಿರುಗಿಸುತ್ತೇನೆಂಬುದಾಗಿ ಹೇಳಿ ಎಲ್ಲರ ಮನ ಗೆದ್ದರು.
ಪ್ರಧಾನಿ ಮೋದಿಯವರ ಈ ನಡೆ ರಾಷ್ಟ್ರಾದ್ಯಂತ ಪ್ರಶಂಸೆಗೆ ಪಾತ್ರವಾಗಿದ್ದು ಪ್ರಧಾನಿಯಂಥ ಅತ್ಯುನ್ನತ ಹುದ್ದೆಯಲ್ಲಿದ್ದರೂ ಅಧಿಕಾರದ ಮದ ತಲೆಗೇರಿಸಿಕೊಳ್ಳದ ಮೋದಿಯವರನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.