22 ಅಗ್ರ ನಾಯಕರಲ್ಲಿ ಮೋದಿ ಮೊದಲಿಗರು

0
328

ಮೋದಿ ವರ್ಚಸ್ಸಿಗೆ ಸರಿ ಸಾಟಿ ಯಾರೂ ಇಲ್ಲ

ದಿನಗಳೆದಂತೆ ಚಂದ್ರನ ಕಳೆ ಹೆಚ್ಚಾಗುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜಾಗತಿಕ ವರ್ಚಸ್ಸು ಹೆಚ್ಚಾಗುತ್ತಲೇ ನಡೆದಿದ್ದು ಮತ್ತೊಮ್ಮೆ ಮೋದಿ ಜಗತ್ತಿನ ನಂ. ೧ ನಾಯಕನಾಗಿ ಹೊರಹೊಮ್ಮಿದ್ದಾರೆ.

ಅಮೆರಿಕಾದ ಮಾರ್ನಿಂಗ್​ ಕನ್ಸಲ್ಟ್​ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ವರ್ಚಸ್ಸು ಮತ್ತಷ್ಟು ಹೆಚ್ಚಾಗಿರೋದು ಬಯಲಾಗಿದೆ. ಜಾಗತಿಕ ಪ್ರಭಾವಿ ನಾಯಕರ ಕುರಿತು ಸರ್ವೆ ನಡೆಸಿರುವ ಮಾರ್ನಿಂಗ್​ ಕನ್ಸಲ್ಟ್​ ಸಂಸ್ಥೆ ಜನವರಿ 26ರಿಂದ 31ರವರೆಗೆ 20 ಸಾವಿರ ಜನರ ಸಂದರ್ಶನ ನಡೆಸಿದೆ. ಈ ಸಂದರ್ಶನದಲ್ಲಿ ವಿಶ್ವದ ವಿವಿಧ ನಾಯಕರ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಿರುವ ಸಂಸ್ಥೆ ಈ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿದೆ. 

ಸಂಸ್ಥೆಯು ನಡೆಸಿದ ಸರ್ವೆಯಲ್ಲಿ ಶೇ.78ರಷ್ಟು ರೇಟಿಂಗ್​ನೊಂದಿಗೆ ಮೊದಲ ಸ್ಥಾನವನ್ನ ಮೋದಿ ಪಡೆದುಕೊಂಡಿದ್ದಾರೆ. ಶೇ.68 ರಷ್ಟು ರೇಟಿಂಗ್​ ಪಡೆದಿರೋ ಮೆಕ್ಸಿಕೋ ಅಧ್ಯಕ್ಷ ಲೋಪೆಜ್​ 2ನೇ ಸ್ಥಾನ. ಶೇ.62 ರಷ್ಟು ರೇಟಿಂಗ್​ ಪಡೆದಿರೋ ಸ್ವಿಸ್​ ಅಧ್ಯಕ್ಷ ಅಲೈನ್​ ಬರ್ಸೆಟ್ ಮೂರನೇ ಸ್ಥಾನ. ಶೇ.58 ರಷ್ಟು ರೇಟಿಂಗ್​ ನೊಂದಿಗೆ ಅಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್​ ನಾಲ್ಕನೇ ಸ್ಥಾನ. ಶೇ.50 ರಷ್ಟು ರೇಟಿಂಗ್​ನೊಂದಿಗೆ ಬ್ರೆಜಿಲ್​ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಐದನೇ ಸ್ಥಾನ.. ಶೇ.48 ರಷ್ಟು ರೇಟಿಂಗ್​ನಲ್ಲಿ ಇಟಲಿ ದೇಶದ ಮೊದಲ ಮಹಿಳಾ ಪ್ರಧಾನ ಜಾರ್ಜಿಯಾ ಮೆಲೋನಿ 6ನೇ ಸ್ಥಾನ. ಶೇ.40 ರೇಟಿಂಗ್​ನೊಂದಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್​ 7ನೇ ಸ್ಥಾನ. ನಾರ್ವೇಜಿಯನ್​ ಪ್ರಧಾನಿ ಜೋನಸ್​ ಗಹರ್​ ಶೇ.38 ರೇಟಿಂಗ್​ನೊಂದಿಗೆ 8ನೇ ಸ್ಥಾನ.. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್​ ಸಿಯೋಕ್​-ಯೌಲ್​ ಶೇ.36 ರೇಟಿಂಗ್​ನೊಂದಿಗೆ 9ನೇ ಸ್ಥಾನ.

ಭಾರತೀಯ ಮೂಲದ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಶೇ.30 ರಷ್ಟು ರೇಟಿಂಗ್​ನೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ. ಒಟ್ಟಿನಲ್ಲಿ ವಿಶ್ವದ ದೈತ್ಯ ರಾಷ್ಟಗಳ ನಾಯಕರನ್ನ ಹಿಂದಿಕ್ಕಿ ನರೇಂದ್ರ ಮೋದಿ ಅಗ್ರ ಸ್ಥಾನಕ್ಕೇರಿರೋದು ಅಭಿಮಾನಗಳ ಮೊಗದಲ್ಲಿ ಸಂತಸ ಮೂಡಿಸಿದೆ.. ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷರನ್ನೂ ಮೋದಿ ಹಿಂದಿಕ್ಕಿರೋದು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನಕ್ಕೆ ಹಿಡಿದ ಕೈಗನ್ನಡಿಯಂತಾಗಿದೆ.

ಪ್ರಧಾನಿಯಾಗುತ್ತಲೇ ವಿದೇಶಗಳ ಗೆಳೆತನ ಮಾಡಿ ಜಾಗತಿಕ ನಾಯಕ ಎನಿಸಿಕೊಂಡ ಮೋದಿಯವರು ಎಷ್ಟೋ ವಿರೋಧಿಗಳ ಕುತಂತ್ರಗಳ ನಡುವೆಯೂ ಗೆದ್ದು ಬಂದಿದ್ದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿಯೇ ಸರಿ. ಮೋದಿಯವರ ನಾಯಕತ್ವ ಭಾರತದ ಪಾಲಿಗೊಂದು ಹೆಮ್ಮೆಯ ಗರಿ ಎನಿಸಿಕೊಂಡಿದೆ.