Homeಸುದ್ದಿಗಳುಈಶ್ವರ ಖಂಡ್ರೆ ರೋಡ್ ಶೋದಲ್ಲಿ ಮೋದಿ ಘೋಷಣೆ

ಈಶ್ವರ ಖಂಡ್ರೆ ರೋಡ್ ಶೋದಲ್ಲಿ ಮೋದಿ ಘೋಷಣೆ

ಬೀದರ – ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಚಾರ ಸಮಯದಲ್ಲಿ ಅಪಾರ ಜನತೆ ಮೋದಿ ಮೋದಿ ಜೈ ಕಾರ ಘೋಷಣೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ನಡೆದಿದೆ.

ಇದೇ ರೀತಿ ಭಾಲ್ಕಿ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ಮೋದಿಯವರ ಪರವಾದ ಘೋಷಣೆಗಳು ಕೇಳಿ ಬಂದು ಈಶ್ವರ ಖಂಡ್ರೆ ಮುಜುಗರ ಪಡುವಂತೆ ಆಗಿದೆ.

ಒಂದು ಕಡೆ ಕಾಂಗ್ರೆಸ್ ಕಾರ್ಯಕರ್ತರ ಜೈ ಕಾರ.. ಇನ್ನೊಂದು ಕಡೆ ನರೇಂದ್ರ ಮೋದಿ ಜೈಕಾರ.

ಭಾಲ್ಕಿ ಕ್ಷೇತ್ರವು  ಖಂಡ್ರೆ ವರ್ಸಸ್ ಖಂಡ್ರೆ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದು ಬಿಜೆಪಿಯಿಂದ ಪ್ರಕಾಶ ಖಂಡ್ರೆ ಹಾಗೂ ಕಾಂಗ್ರೆಸ್ ನಿಂದ ಈಶ್ವರ ಖಂಡ್ರೆ ಸ್ಪರ್ಧೆ ಮಾಡಿದ್ದಾರೆ. ಈ ಇಬ್ಬರು ಸಹೋದರರ ಜಟಾಪಟಿಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಪರವಾದ ಹಾಗೂ ಮೋದಿ ಪರವಾದ ಘೋಷಣೆಗಳನ್ನು ಕೂಗುತ್ತ ಚುನಾವಣೆಗೆ ಬಿಸಿ ಮುಟ್ಟಿಸಿದ್ದಾರೆ.

ಖಂಡ್ರೆ ಪ್ರಚಾರದ ಸಮಯದಲ್ಲಿ ಜನರು ಮೋದಿ ಮೋದಿ ಎಂದು ಕೂಗುತ್ತಿರುವ ವಿಡಿಯೋ ಈಗ  ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ವೈರಲ್ ಆಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group