ಸವದತ್ತಿ – ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹಾಗೂ ಬೆಡಸೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವಂಥ ಪರಸಗಡ ಕೋಟೆಯಲ್ಲಿ ಮಂಗಗಳ ಕಾಟ ಶುರುವಾಗಿದೆ.
ದರ್ಶನಕ್ಕೆ ಬಂದಂಥ ಭಕ್ತಾದಿಗಳಿಗೆ ಮಂಗಗಳು ಅವರ ಕೈಲಿದ್ದ ಬ್ಯಾಗು ಮೊಬೈಲ್ ಇವನ್ನೆಲ್ಲಾ ಕಸಿದುಕೊಂಡು ಹೋಗುತ್ತಿರುವುದು ಹಾಗೂ ಭಕ್ತರಿಗೆ ಕಚ್ಚುವುದು ಮಾಡುತ್ತಿರುವುದರಿಂದ ಭಕ್ತರಲ್ಲಿ ಭಯ ಹೆಚ್ಚಾಗಿದೆ.
ಈಗಾಗಲೇ ಕೆಲವು ಭಕ್ತರನ್ನು ಮಂಗಗಳು ಕಚ್ಚಿವೆ. ಹೀಗೆ ಮಂಗಗಳು ಕಚ್ಚುವುದರಿಂದ ನಂಜು ಏರುವ ಸಂಭವ ಇದ್ದು ಅದು ಪ್ರಾಣ ಘಾತಕವಾಗುವ ಅಪಾಯ ಕೂಡ ಇದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಯಲ್ಲಮ್ಮ ದೇವಸ್ಥಾನ ಹಾಗೂ ಪರಸಗಡ ಕೋಟೆಯ ಆವರಣದಲ್ಲಿನ ಮಂಗಗಳ ಕಾಟಕ್ಕೆ ಒಂದು ಪರಿಹಾರ ಕಂಡುಹಿಡಿದು ಭಕ್ತರನ್ನು ಕಾಪಾಡಬೇಕೆಂದು ಸಾರ್ವಜನಿಕರು ವಿನಂತಿ ಮಾಡಿಕೊಂಡಿದ್ದಾರೆ.

