ಬೆಳಗಾವಿ – ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಘಟಕ ಬೆಳಗಾವಿ ಮತ್ತು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ ಸೇರಿ ಮಾಸಿಕ ಸಭೆ ದಿನಾಂಕ.15 ರಂದು ಬೆಳಗಾವಿ ಜಿಲ್ಲಾ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ. ಎಸ್.ಜಿ. ಸಿದ್ನಾಳ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಎ ವೈ ಬೆಂಡಿಗೇರಿ ,ಎಂ ಎನ್ ಮುದಕವಿ ಆಗಮಿಸಿದ್ದರು. ಸಾಲುಮರದ ತಿಮ್ಮಕ್ಕ ನಿದನಕ್ಕೆ ಒಂದುನಿಮಿಷ ಮೌನಾಚರಣೆ ಮಾಡಲಾಯಿತು. ಆರೋಗ್ಯ ಸಂಜೀವಿನಿಯನ್ನು ನಿವೃತ್ತರಿಗೆ ವಿಸ್ತರಿಸಲು ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಯಿತು.
ನವ್ಹಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸಲು ಹಿರಿಯ ನಾಗರಿಕರಿಗೆ ವಿಶೇಷ ಕೌಂಟರ್ ತೆರೆಯಲು ನೆಹರು ನಗರ್ ಲೀಡ್ ಬ್ಯಾಂಕ್ ಮ್ಯಾನೇಜರ್ ಕೆ ಎಲ್ ಇ ಆವರಣ ಇವರಿಗೆ ಸಲ್ಲಿಸಲಾಯಿತು. ಮಹಾಂತೇಶ ಹಿರೇಮಠ ಇವರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾರಣ ಕರ್ನಾಟಕ ರಾಜ್ಯ ನಿವೃತ್ತ ನೌಕರ ಸಂಘದ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಸೇರಿ ಸನ್ಮಾನಿಸಲಾಯಿತು.
ಬೆಳಗಾವಿ ಜಿಲ್ಲೆಯ ಎಲ್ಲತಾಲೂಕ ಅಧ್ಯಕ್ಷರು ಮತ್ತು ಜಿಲ್ಲಾ ಪದಾದಿಕಾರಿಗಳು ಉಪಸ್ಥಿತರಿದ್ದರು ಡಿ ಎಸ್ ವಾಗೂಕರ, ಬಸವರಾಜ ಛೆಟ್ಟರ, ನಿರಲಗಿಮಠ,ಕೃಷ್ಣಪ್ಪ ಲಮಾಣಿ, ಬಾಳಗೌಡ ದೊಡಬಂಗಿ ಆರ್ ವಿ ಬನಶಂಕರಿ,ಎಂ ವೈ ಮೆಣಸಿನಕಾಯಿ,ಮುಲ್ಲಾ ಸರ,ಇತರರು ಉಪಸ್ಥಿತರಿದ್ದರು. ಆರಂಭದಲ್ಲಿ ಸುಶೀಲಾ ರಜಪೂತ ಸ್ವಾಗತಿಸಿದರು. ಶಿವಾನಂದ ಕುಂದರಗಿ ವಂದಿಸಿದರು.

