೨.೨೫ ಕೋಟಿಗಿಂತಲೂ ಹೆಚ್ಚು ಲಸಿಕೆ ! ಭಾರತವೀಗ ‘ಲಸಿಕಾ ಗುರು’

Must Read

ಹೊಸದಿಲ್ಲಿ – ಒಂದೇ ದಿನದಲ್ಲಿ ೨.೨೫ ಕೋಟಿ ಕೋವಿಡ್ ಲಸಿಕೆ ನೀಡುವ ಮೂಲಕ ಭಾರತವೀಗ ಇಡೀ ವಿಶ್ವದಲ್ಲೇ ಒಂದನೇ ಸ್ಥಾನದಲ್ಲಿದ್ದು ಲಸಿಕಾ ಗುರು ಎನಿಸಿಕೊಂಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಜನ್ಮದಿನವಾದ ಇಂದು ದೇಶಾದ್ಯಂತ ಅತ್ಯಂತ ಉತ್ಸಾಹದಿಂದ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿದ್ದು ಇದರಿಂದ ದೇಶದ ಜನತೆಯ ವಿಶ್ವಾಸ ಮೋದಿಯವರ ಮೇಲೆ ಮತ್ತಷ್ಟು ಹೆಚ್ಚಾದಂತಾಗಿದೆ.

ಕೇವಲ ನಾಲ್ಕು ದಿನಗಳ ಹಿಂದೆ ಒಂದು ದಿನದಲ್ಲಿ ಒಂದು ಕೋಟಿ ಲಸಿಕಾಕರಣವಾಗಿದ್ದನ್ನು ಹೆಮ್ಮೆಯಿಂದ ಹೇಳುತ್ತಿದ್ದ ಭಾರತವೀಗ ಹೊಸ ದಾಖಲೆ ಬರೆದಿದ್ದು ಕೇವಲ ಎಂಟು ಗಂಟೆಗಳಲ್ಲಿ ೨ ಕೋಟಿ ೨೫ ಲಕ್ಷ ಲಸಿಕೆಯನ್ನು ನೀಡಿದೆ. ಇದು ಜಗತ್ತಿನ ಕೆಲವು ದೇಶಗಳ ಜನಸಂಖ್ಯೆ ಗಿಂತಲೂ ಹೆಚ್ಚಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿಯವರು, ಭಾರತದ ಜನತೆಗೆ ಇಂದು ಅತ್ಯಂತ ಹೆಮ್ಮೆಯ ದಿನ ಎಂದಿದ್ದಾರೆ.

ಮೋದಿಯವರ ಜನ್ಮದಿನವಾದ ಇಂದು ಜನರು ಉತ್ಸಾಹದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಅಭಿಮಾನ ಮೆರೆದರು. ಅವುಗಳಲ್ಲಿ ಲಸಿಕಾ ಕಾರ್ಯಕ್ರಮವೂ ಒಂದು. ಅನೇಕ ಸ್ವಯಂ ಸೇವಾ ಸಂಘಗಳು, ಬಿಜೆಪಿ ಕಾರ್ಯಕರ್ತರು ಮುಂದೆ ಬಂದು ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದರು.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group