ಹಳ್ಳೂರ- ಕಬ್ಬಿನ ಸಸಿ ಮಾಡಿ ನಾಟಿ ಮಾಡುವುದರಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದು ರೈತ ಅರ್ಥಿಕವಾಗಿ ಸಬಲರಾಗಬಹುದು ಎಂದು ಅಲ್ಲನ ಗೌಡ ಪಾಟೀಲ ಅವರು ಹೇಳಿದರು.
ಶಿವಾಪೂರ ಗ್ರಾಮದ ಭೀಮಪ್ಪ ಬೆಳಗಲಿ ಅವರ ತೋಟದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ,ಬಿ ಸಿ ಟ್ರಸ್ಟ್ ( ರಿ ) ಮೂಡಲಗಿ ಗ್ರಾಮಿಣ ವಲಯದ ವತಿಯಿಂದ ನಡೆದ ಸುಸ್ಥಿರ ಕಬ್ಬಿನ ಬೇಸಾಯದ ಬಗ್ಗೆ ರೈತ ಕ್ಷೇತ್ರ ಶಾಲಾ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮೀಣ ಕಬ್ಬಿನ ಬೇಸಾಯ ದ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಗತಿಪರ ರೈತರು, ಕಬ್ಬಿನ ಬೇಸಾಯದಲ್ಲಿ ನಾಟಿ ಮಾಡುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಬ್ಬಿನ ಕಣ್ಣು ಕಸಿ ವಿಧಾನದ ದೊಣ್ಣಿ ಹುಳು ನಿಯಂತ್ರಣದ ಸರಳ ಮಾರ್ಗ ಹೇಳಿದರು, ಕಡಿಮೆ ಖರ್ಚು ಮಾಡಿ, ಹೆಚ್ಚು ಆದಾಯ ಪಡೆಯುವ ತಳಿಗಳ ಆಯ್ಕೆ ಮಾಡುವ ವಿಧಾನದ ಬಗ್ಗೆ ಬಿಜೋಪಚಾರ ಮಾಡುವ ವಿಧಾನದ , ಅಂತರ ಬೆಳೆ,ಬೇಸಾಯದ ಬಗ್ಗೆ,ಮಾಹಿತಿ ನೀಡಿದರು,
ಕೃಷಿ ಮೇಲ್ವಿಚಾರಕರಾದ ಮೈಲಾರಪ್ಪ ಪೈಲಿ ಪ್ರಸ್ತಾವಿಕವಾಗಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಮೇಲ್ವಿಚಾರಕರಾದ ರವಿ ಜಾಡಗೊಪ್ಪದ ಇವರು ಸರ್ವ ಸದಸ್ಯರ ಪ್ರಬುದ್ಧತೆ ನಮ್ಮ ಬದ್ಧತೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಮುರಿಗೆಪ್ಪ ಮಾಲಗಾರ, ಪ್ರಗತಿಪರ ರೈತರಾದ ಶಿವಪುತ್ರಪ್ಪ ಹುಣಶ್ಯಾಳ, ದುಂಡಪ್ಪ ತುಕ್ಕನವರ, ರಾಮಪ್ಪ ಕುಂದರಗಿ, ಸ್ವ ಸಹಾಯ, ಸಂಘ ದ ಸದಸ್ಯರು, ರೈತರು ಭಾಗವಹಿಸಿದರು. ಸೇವಾ ಪ್ರತಿನಿಧಿಯಾದ ಸುನಂದಾ ಮೇನಸಪ್ಪಗೋಳ, ಕಾರ್ಯಕ್ರಮ ನಿರೂಪಿಸಿದರು. ಕಸ್ತೂರಿ ಸವದಿ ವಂದಿಸಿದರು. ಯಲ್ಲವ್ವ ಬೆಳಗಲಿ ಸ್ವಾಗತಿಸಿದರು.