ಸಮಾಜ ಕಲ್ಯಾಣಕ್ಕೆ ದರ್ಗಾದಲ್ಲಿ ೨೧ ದಿವಸ ಅನುಷ್ಠಾನಕ್ಕೆ ಕುಳಿತ ಹಿಂದು ಯುವಕ
ಬೀದರ – ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟ್ಟಗ್ಯಾಳ ಗ್ರಾಮ ಇಡೀ ದೇಶಕ್ಕೆ ಭಾವೈಕ್ಯತೆಯ ಮಾದರಿಯಾಗಿದೆ.
ಈ ಕೊಟ್ಟಗ್ಯಾಳ ಗ್ರಾಮದ ಇತಿಹಾಸ ಪುಟ ತಿರುವಿ ನೋಡಿದರೆ ಎಲ್ಲರಿಗೂ ಕೊಟ್ಟಗ್ಯಾಳ ಗ್ರಾಮಕ್ಕೆ ಭೆಟ್ಟಿ ನೀಡಬೇಕು ಎಂದು ಅನಿಸುತ್ತದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ನಡೆದಾಡಿದ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಟ್ಟಗ್ಯಾಳ ಗ್ರಾಮ ಇಂದು ಇಡೀ ದೇಶದಲ್ಲಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದು ಈ ಗ್ರಾಮದಲ್ಲಿ ಜಾತಿ ಮರೆತು ನಾವು ಎಲ್ಲರೂ ಒಂದೇ ಎಂದು ಕೂಡಿ ಬಾಳುವ ಮೂಲಕ ತೋರಿಸಿಕೊಟ್ಟಿದ್ದಾರೆ. ಈ ಗ್ರಾಮದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮೌಲಾಲಿ ದರ್ಗಾ ಮುಸ್ಲಿಂ ಸಮುದಾಯದ ದರ್ಗಾ ಆದರೂ ಈ ಗ್ರಾಮದ ಪ್ರತಿಯೊಬ್ಬರ ಮನೆ ದೇವರಾಗಿದೆ. ಹಿಂದೂ ಧರ್ಮದ ಯುವಕನ ಮೈಮೇಲೆ ಮೌಲಾಲಿ ದೇವರು ಬರುತ್ತಾರೆ ಎಂದು ಊರಿನ ಜನರ ನಂಬಿಕೆಯಾಗಿದೆ.ಈ ಹಿಂದೂ ಯುವಕ ಇಂದಿನಿಂದ 21ದಿನಗಳವರೆಗೆ ನಾಡಿನ ಜನತೆಯ ಕಲ್ಯಾಣಕ್ಕೋಸ್ಕರ ಮೌಲಾಲಿ ದರ್ಗಾದಲ್ಲಿ ಅನುಷ್ಠಾನಕ್ಕೆ ಕುಳಿತುಕೊಳ್ಳಲಿದ್ದಾನೆ.
ಈ ಕೊಟ್ಟಗ್ಯಾಳ ಗ್ರಾಮದ ಜನರ ಭಾವೈಕ್ಯತೆ ಇಡೀ ದೇಶದಾದ್ಯಂತ ಎಲ್ಲಾ ಜನರಲ್ಲಿ ಭಾವನೆ ಮೂಡಿದರೆ ದೇಶದಲ್ಲಿ ಶಾಂತಿ ನೆಲೆಸುವುದರಲ್ಲಿ ಯಾವುದೆ ಸಂದೇಹವಿಲ್ಲ ಹಾಗೂ ಬಸವಣ್ಣನವರು ಕಂಡ ಕನಸು ನನಸಾಗಬಹುದು ಎಂದು ಕೊಟ್ಟಗ್ಯಾಳ ಗ್ರಾಮ ಹಿರಿಯರ ಅಭಿಪ್ರಾಯವಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ