ರಾಮಾಚಾರಿ 2.0 ಚಿತ್ರದಲ್ಲಿ ಮೂಡಲಗಿಯ ಕಲಾವಿದ

0
502

ಮೂಡಲಗಿ: ಹೌದು, ನಟ, ಅಲ್ಟಿಮೇಟ್ ಸ್ಟಾರ್ ತೇಜ್ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೈಂಟಿಫಿಕ್ ಥ್ರಿಲ್ಲರ್ ಕಥೆ ಇರುವ ರಾಮಾಚಾರಿ 2.0 ಚಿತ್ರದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿಯ ಕಲಾವಿದ ಮಂಜುನಾಥ ರೇಳೆಕರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಈ ಚಿತ್ರದಲ್ಲಿ ದೊಡ್ಡ ತಾರಾಬಳಗ ಇದೆ ಎನ್ನುವುದು ಖುಷಿಯ ವಿಚಾರ. ಏಕೆಂದರೆ ಚಿತ್ರದ ನಾಯಕಿ ಕಿರುತೆರೆ ನಟಿ ಕೌಸ್ತುಭಾ ಮಣಿ, ನಾಯಕನ ತಂದೆ ಪಾತ್ರದಲ್ಲಿ ದೊಡ್ಮನೆ ಮಗ ರಾಘವೇಂದ್ರ ರಾಜಕುಮಾರ, ಸ್ಪರ್ಶ ರೇಖಾ ಮತ್ತಿತರರು ನಟನೆ ಮಾಡುತ್ತಿದ್ದು ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ‌ ಎಂದು ತಿಳಿದುಬಂದಿದೆ.

ನಂತರದಲ್ಲಿ ಈ ಚಿತ್ರದ ಭಾಗ 2 ಚಿತ್ರೀಕರಣ ಆರಂಭವಾಗಲಿದೆ. ಏನೇ ಆಗಲಿ ಮೂಡಲಗಿಯಲ್ಲಿ ಈಗಾಗಲೇ ಮಿಸ್ಟರ್ ಬೀನ್ ಎಂದೇ ಖ್ಯಾತಿ ಗಳಿಸಿರುವ ಮಂಜುನಾಥ ಈ ಚಿತ್ರದಲ್ಲಿ ನಟಿಸುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಊರಿನ ಕಲಾವಿದರಿಗೆ ಹೆಚ್ಚು ಅವಕಾಶ ಬರಲಿ ಎನ್ನುವುದೇ ಮೂಡಲಗಿಯ ಕಲಾಭಿಮಾನಿಗಳ ಆಶಯ.