ಮೂಡಲಗಿ – ಇತ್ತೀಚೆಗೆ ಮೂಡಲಗಿಯ ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಪಾಂಡುರಂಗ ಮಹೇಂದ್ರಕರ ಅವರನ್ನು ಸ್ಥಳೀಯ ಶ್ರೀ ವಿಠ್ಠಲ ಮಂದಿರದಲ್ಲಿ ಶ್ರೀ ನಾಮದೇವ ಶಿಂಪಿ ಸಮಾಜದ ವತಿಯಿಂದ ಸತ್ಕರಿಸಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಶ್ರೀರಂಗ ಮಂದ್ರೋಳಿ, ಉಪಾಧ್ಯಕ್ಷರಾದ ಗಂಗಾರಾಂ ರೇಳೆಕರ, ಸದಸ್ಯರಾದ ಜಗದೀಶ್ ಮಂದ್ರೋಳಿ ಪಾಂಡುರಂಗ ಮಂದ್ರೋಳಿ, ಅಶೋಕ ಇತಾಪೆ, ಗಜಾನನ ರೇಳೆಕರ, ಶಂಕರ ಕೊಂಕಣಿ, ಪುಂಡಲೀಕ ರೇಳೆಕರ, ಶ್ರೀಪಂತ ಹಾವಳ, ಪ್ರಕಾಶ ಮಂದ್ರೋಳಿ ಇತರರು ಹಾಜರಿದ್ದರು.