ಮೂಡಲಗಿ – ಇದೇ ದಿ. ೨೮ ರಂದು ತಾಲೂಕಿನ ಎಲ್ಲಾ ಪಡಿತರ ವಿತರಣಾ ಕೇಂದ್ರಗಳಲ್ಲಿನ ಸರ್ವರ್ ನಿರ್ವಹಣಾ ಕಾರ್ಯವನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ಕೈಗೊಂಡಿದ್ದು ಆ ಕಾರಣ ಇದೇ ದಿ. ೨೭ ರ ಒಳಗಾಗಿ ಎಲ್ಲ ಪಡಿತರವನ್ನು ವಿತರಿಸಬೇಕೆಂದು ಸೂಚಿಸಲಾಗಿದೆ.
ಈ ಬಗ್ಗೆ ತಹಶಿಲ್ದಾರರು ಪ್ರಕಟಣೆಯೊಂದನ್ನು ಹೊರಡಿಸಿ, ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ದಿ.೨೭.೬.೨೩ ರ ಒಳಗಾಗಿ ಜೂನ್ ತಿಂಗಳ ಪಡಿತರ ಪೂರೈಸಬೇಕೆಂಬುದಾಗಿ ಸೂಚನೆ ನೀಡಿದ್ದಾರೆ.