ಮೂಡಲಗಿ: ಅನುಪಯೋಗಿ ಕೃಷಿ ಉಪಕರಣಗಳನ್ನು ಬಳಸಿ ನೆಲಗಡಲೆ (ಶೇಂಗಾ) ಕೊಯ್ಲು ಯಂತ್ರವನ್ನು ಕೇವಲ 240 ರೂಗಳಲ್ಲಿ ತಯಾರಿಸಿ ರಾಷ್ಟ್ರ ಮಟ್ಟದ ಅಟಲ್ ಲ್ಯಾಬ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗಿಯಾರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ರವಿವಾರ ಜು-30 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಆಯೋಜಿಸಿದ ರಾಷ್ಟ್ರ ಮಟ್ಟದ ಅಟಲ್ ಲ್ಯಾಬ್ ವಿಜ್ಞಾನ ವಸ್ತು ಪ್ರದರ್ಶನದ ಮಳಿಗೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾದವಾಡ ಗ್ರಾಮದ ಜಿ.ಎನ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ 09 ನೇ ತರಗತಿ ವಿದ್ಯಾರ್ಥಿಗಳಾದ ಪವನ ಕೊಲ್ಲಾಪುರ ಮತ್ತು ಬಸವರಾಜ ಕೌಜಲಗಿ ಅವರನ್ನು ಭೇಟಿ ಶುಭ ಹಾರೈಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಭಾರತ ಸರಕಾರದ ನೀತಿ ಆಯೋಗದಡಿಯಲ್ಲಿ ಬರುವ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯಡಿಯಲ್ಲಿ ಸಿ.ಜಿ.ಐ ಮತ್ತು ಲರ್ನಿಂಗ್ ಲಿಂಕ್ ಪೌಂಡೇಶನ ಸ್ವ ಸಹಾಯ ಸಂಸ್ಥೆಗಳು ಈ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಇವರ ಸ್ವಚಾಲಿತ ಯಂತ್ರವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ದೆಹಲಿ ಪ್ರಗತಿ ಮೈದಾನದಲ್ಲಿ ನಡೆಯುವ ವಸ್ತು ಪ್ರದರ್ಶನಕ್ಕೆ ಕಳುಹಿಸಿ ಕೊಟ್ಟಿದೆ ಎಂದರಲ್ಲದೇ
ನಮ್ಮ ಭಾಗದ ಮಕ್ಕಳ ಪ್ರತಿಭೆಯನ್ನು ದೆಹಲಿಯಲ್ಲಿ ಕಂಡು ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಶಿಕ್ಷಣ ಇಲಾಖೆ ಸಚಿವ ಧರ್ಮೇಂದ್ರ ಪ್ರಧಾನ, ಕೇಂದ್ರ ಶಿಕ್ಷಣ ರಾಜ್ಯ ಸಚಿವ ಡಾ. ಸುಭಾಸ್ ಸರ್ಕಾರ್, ಮಾರ್ಗದರ್ಶಕರಾದ ಎಸ್ ಎಸ್ ಬಳೂರಗಿ ಉಪಸ್ಥಿತರಿದ್ದರು.