ಅಮಟೂರು ಬಾಳಪ್ಪ ಉತ್ಸವದಲ್ಲಿ ಮಹಾಂತೇಶ ಮುದಕನಗೌಡರಿಗೆ ಸನ್ಮಾನ

Must Read

ಬೈಲಹೊಂಗಲ- ಅಮಟೂರು ಬಾಳಪ್ಪ ಉತ್ಸವದಲ್ಲಿ ಬೈಲಹೊಂಗಲ ತಾಲೂಕು ಬೈಲವಾಡದ ಗಣ್ಯ ಮನೆತನದ, ಸಾಹಿತಿ ಕಲಾವಿದ, ಗಾಯಕ, ಕುಂದಾನಗರ ಗಾನ ಕೋಗಿಲೆ ಪ್ರಶಸ್ತಿ ವಿಜೇತ ಮಹಾಂತೇಶ ಶಿವಪ್ಪ ಮುದಕನಗೌಡರ ಅವರು ರಚಿಸಿದ ವೀರ ಕೇಸರಿ ಅಮಟೂರು ಬಾಳಪ್ಪ ಸ್ವರಚಿತ ಕವನಕ್ಕೆ ಉತ್ಸವದ ವತಿಯಿಂದ ಬೈಲಹೊಂಗಲ ತಾಲ್ಲೂಕಿನ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಆಗಿರುವ ತಹಶೀಲ್ದಾರ ಹನುಮಂತ ಶಿರಹಟ್ಟಿ ಅವರು ಮಹಾಂತೇಶ್ ಮುದಕನಗೌಡರ ಅವರಿಗೆ ಉತ್ಸವದಲ್ಲಿ ಸ್ಮರಣಿಕೆ ನೀಡಿ ಗೌರವಿಸಿದರು.

ಸನ್ಮಾನಿತ ಮಹಾಂತೇಶ ರವರು ವೃತ್ತಿಯಲ್ಲಿ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಉದ್ಯೋಗಿಯಾದರು ಕನ್ನಡ ಸಾಹಿತ್ಯದ ಅಪಾರ ಒಲವು ಹೊಂದಿದ್ದಾರೆ. ಕಥೆ,ಕವನ,ಶಾಲಾ ಗೀತೆ ಮತ್ತು ಚುಟುಕುಗಳನ್ನು ಬರೆದಿದ್ದಾರೆ.ಉತ್ತಮ ವಾಗ್ಮಿಯೂ ಆಗಿರುವ ಮಹಾಂತೇಶ ರವರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಹಾಗೂ ಕೇಂದ್ರ ಬಸವ ಸಮಿತಿಯ ಬಸವ ಪಥ ಸದಸ್ಯರು ಆಗಿ ಕನ್ನಡದ ಸೇವೆ ಸಲ್ಲಿಸುತ್ತಿದ್ದಾರೆ.

ಕವಿ ಮಹಾಂತೇಶ ರವರನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ, ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬಸವರಾಜ ಬಾಳೇಕುಂದರಗಿ, ಉಪಾಧ್ಯಕ್ಷರಾದ ರಾಜು ಕುಡಸೋಮಣ್ಣವರ, ವ್ಯವಸ್ಥಾಪಕರ ನಿರ್ದೇಶಕರಾದ ಜಿ.ಎಂ.ಪಾಟೀಲ, ನಿರ್ದೇಶಕರಾದ ಉಮೇಶ ಬಾಳಿ,ರಾಚಪ್ಪ ಮಟ್ಟಿ, ಪ್ರಕಾಶ ಮೂಗಬಸವ,ಮಹಾಂತೇಶ ಮತ್ತಿಕೊಪ್ಪ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಟಗಿ, ಶ್ರೀಮತಿ ಅನಿತಾ ಮೆಟಗುಡ್ಡ,ಶ್ರೀಮತಿ ಕಸ್ತೂರಿ  ಸೋಮನಟ್ಟಿ, ಅದೃಶಪ್ಪ ಕೊಟಬಾಗಿ,ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ,ಸಣ್ಣ ಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ,ಶ್ರೀಶೈಲ ಶರಣಪ್ಪನವರ,ಶಿವಾನಂದ ದೂತಗುಂಡಿ,ಬಸವರಾಜ ಬೋಳಗೌಡರ,ಶ್ರೀಶೈಲ ಮೂಗಬಸವ,ಸಿದ್ದನಗೌಡ ಪಾಟೀಲ( ಅಮರಾಪುರ) ಕಾರ್ಯದರ್ಶಿ ಅಶೋಕ ಬೋಮ್ಮಣವರ, ಸಿಬ್ಬಂದಿ ವರ್ಗ ಮತ್ತು ಕಾರ್ಮಿಕ ವರ್ಗ ಮಹಾಂತೇಶ ಮುದಕನಗೌಡರ ಅವರಿಗೆ ಅಭಿನಂದಿಸಿದ್ದಾರೆ.

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group