ಇoದಿನಿಂದ ಮುಕ್ತಿಮಠದ ಜಾತ್ರಾ ಮಹೋತ್ಸವ

Must Read

ಬೆಳಗಾವಿ: ತಾಲೂಕಿನ ಭೂತರಾಮನಹಟ್ಟಿಯ ಭೂ ಕೈಲಾಸ ಪುಣ್ಯಸ್ಥಳವಾದ ಸುಕ್ಷೇತ್ರ ಮುಕ್ತಿಮಠದ ವರ್ಷ ಪರಂಪರೆಯ ಸಂಕ್ರಮಣ ಜಾತ್ರಾಮಹೋತ್ಸವವು ಇದೇ ದಿ 14 ರಿಂದ 18 ರ ವರೆಗೆ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಹಾಗೂ ಸಂಪ್ರದಾಯವಾಗಿ ಆಚರಣೆ ಮಾಡಲಾಗುವುದು ಎಂದು ಕ್ಷೇತ್ರದ ಪೂಜ್ಯರಾದ ಧರ್ಮಶ್ರೀ ತಪೋರತ್ನ ಶಿವಸಿದ್ದ ಸೋಮೇಶ್ವರ್ ಶಿವಾಚಾರ್ಯರು ತಿಳಿಸಿದ್ದಾರೆ

ಪ್ರತಿದಿನ ಸಾಯಂಕಾಲ ಧರ್ಮಸಭೆ,ಜರಗುವುದು ಸದ್ಬಕ್ತರಿಗೆ ಗುರುರಕ್ಷೆಯ ಸನ್ಮಾನ, ಆಶೀರ್ವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ಷೇತ್ರದ ದೇವತೆಗಳಿಗೆ ಅರ್ಚನೆ, ಸಾಧನೆ ಮಾಡಿದ ಮಠದ ಕಾರ್ಯಗಳಿಗೆ ಸೇವೆ ಸಲ್ಲಿಸಿದ ಮಹನೀಯರು ಗಳಿಗೆ ಪ್ರಶಸ್ತಿ ಸಮೇತ ಗುರುರಕ್ಷೆ ನೀಡಿ ಆಶೀರ್ವಾದ ಮಾಡಲಾಗುವದು ಎಂದು ಶ್ರೀ ಶಿವಸಿದ್ದ ಸೋಮೇಶ್ವರ್ ಶಿವಾಚಾರ್ಯರು ಹೇಳಿದರು.

ನಾಡಿನ ವಿವಿಧ ಮಠಗಳ ಪೂಜ್ಯರು, ರಾಜಕೀಯ, ಸಾಮಾಜಿಕ ಗಣ್ಯರು, ಸರ್ಕಾರಿ ಅಧಿಕಾರಿಗಳು ಆಗಮಿಸಿ ಸದ್ಗುರುನಾಥನ ದರ್ಶನ ಪಡೆದು ಪುನೀತ ರಾಗುವರು ಎಂದು ಶ್ರೀಗಳು ಹೇಳಿರುವರು

ಕೋವಿಡ್ 19 ರ ಮಾರ್ಗಸೂಚಿ ಅನ್ವಯ ಎಲ್ಲಾ ಕಾರ್ಯಕ್ರಮಗಳನ್ನೂ ಸರಳವಾಗಿ ಆಚರಣೆ ಮಾಡಲಾಗುವುದು ಈ ಅವಧಿಯಲ್ಲಿ ಪೂಜ್ಯರ ದರ್ಶನ ಆಶೀರ್ವಾದಕ್ಕೆ ಅವಕಾಶ ಕಲ್ಪಿಸಲಾಗಿದೆ, ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವದು, ಪರಸ್ಪರ ಅಂತರ ಕಾಯ್ದುಕೊಳ್ಳುವದು ಸಾನಿಟೈಜರ ಧರಿಸುವದು ಕಡ್ಡಾಯವಾಗಿದೆ ಎಂದು ಶ್ರೀ ಶಿವಸಿದ್ದ ಸೋಮೇಶ್ವರ್ ಶಿವಾಚಾರ್ಯರು ತಿಳಿಸಿರುವರು

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group