ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನ ಕೊಲೆ

Must Read

ಸಿಂದಗಿ: ಪಟ್ಟಣದ ಹೊರವಲಯದ ಕಲಬುರ್ಗಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಲೋಯಲಾ ಸ್ಕೂಲ ಬಳಿ ಅಟೋ ಚಾಲಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ಪಟ್ಟಣದ ಶಿವಶಂಕರ ಬಡಾವಣೆಯ ನಿವಾಸಿ ತೌಪೀಕ ಮಹಿಬೂಬ ಚಿನಿವಾರ 22 ಹತ್ಯೆಗಿಡಾದ ದುರ್ದೈವಿಯಾಗಿದ್ದಾನೆ. ಮೃತನ ಸಹೋದರ ಹಾಜಿಮಲ್ಲಂಗ ತಂ, ಮೈಬೂಬಸಾಬ ಚಿನಿವಾರ ದೂರಿನಲ್ಲಿ ಆರೋಪಿ ನೂರಅಹಮ್ಮದ್ ತಂದೆ ಬುಡೇಸಾಬ ನಾಯಕ ಇವನಿಗೆ ಈ ಹಿಂದೆ ಹಣ ಕೊಡುತಗೊಳ್ಳುವ ಸಲುವಾಗಿ ಆದ ಜಗಳದ ಕಾರಣಕ್ಕಾಗಿ ದಿ.13 ರಂದು ರಾತ್ರಿ 9.00 ಘಂಟೆಯಿಂದ ರಾತ್ರಿ 10.45 ಘಂಟೆಯ ನಡುವಿನ ವೇಳೆಯಲ್ಲಿ ತಮ್ಮ ತೌಫಿಕನಿಗೆ ಸಂಶಯುಕ್ತ ಆರೋಪಿತರಾದ ನೂರಅಹಮ್ಮದ ತಂದೆ ಬುಡೇಸಾಬ ನಾಯಕ ಮತ್ತು ಸಮೀರ ತಂದೆ ರಫೀಕ ನಾಯಕ ಇವರು ತೌಪಿಕ್‍ನನ್ನು ಅಟೋದಲ್ಲಿ ಸಿಂದಗಿಯ ಭೀಮಾ ಸ್ಕೂಲ ಹಿಂದುಗಡೆ ಇರುವ ತಮ್ಮ ಹೊಲಕ್ಕೆ ಕರೆದುಕೊಂಡು ಹೋಗಿ ಯಾವುದೋ ಆಯುಧದಿಂದ ತಲೆಗೆ ಹೊಡೆದು ಭಾರಿ ಗಾಯಪಡಿಸಿ ಕೊಲೆ ಮಾಡಿ ಕೊಲೆ ಮಾಡಿದ್ದನ್ನು ಮುಚ್ಚಿ ಹಾಕುವ ಮತ್ತು ಸಾಕ್ಷಿ ಪುರಾವೆ ನಾಶ ಮಾಡುವ ಉದ್ದೇಶದಿಂದ ಹೆಣವನ್ನು ಮೃತನ ಅಟೋದಲ್ಲಿ ಹಾಕಿ ಲೋಯಲಾ ಸ್ಕೂಲ ಹತ್ತಿರ ಡಾಂಬರ ರಸ್ತೆಯ ಮೇಲೆ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group