ಪ.ಪಂ ಮಾಜಿ ಸದಸ್ಯ ಪ್ರದೀಪ ಯಂಟಮಾನ ಕೊಲೆ; 9 ಆರೋಪಿಗಳ ಬಂಧನ

Must Read

ಸಿಂದಗಿ: ತಾಲೂಕಿನ ಆಲಮೇಲ ಪಟ್ಟಣ ಪಂಚಾಯತ ಮಾಜಿ ಸದಸ್ಯ ಪ್ರದೀಪ ಯಂಟಮಾನ (37) ಅವರನ್ನು ಗುರುವಾರ ರಾತ್ರಿ ಪಟ್ಟಣದ ಗಣೇಶ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಹಳೇ ದ್ವೇಷದ ಹಿನ್ನೆಲೆ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ 13 ಜನರ ಪೈಕಿ 9 ಜನ ಆರೋಪಿಗಳನ್ನು ಶನಿವಾರ ಮಧ್ಯಾಹ್ನ ಸಮೀಪದ ಗುಂದಗಿ ಹಾಗೂ ಅಲ್ಲಹಳ್ಳಿ ಗ್ರಾಮಗಳ ಮಧ್ಯದ ಹೊಲದಲ್ಲಿ ಆಲಮೇಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಇಂಡಿ ಡಿವಾಯ್ ಎಸ್ ಪಿ ಶ್ರೀಧರ ದೊಡ್ಡಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೊಲೆಯಾದ ಪ್ರದೀಪ ಯಂಟಮಾನ ಹಾಗೂ ಮೇಲಿನಮನಿ ಕುಟುಂಬಗಳ ಮಧ್ಯೆ ಈ ಹಿಂದೆ ಹಲವಾರು ಬಾರಿ ಗಲಾಟೆಗಳು ಆಗಿದವು, ಅಂದಿನಿಂದ ಈ ಎರಡು ಕುಟುಂಬಗಳಲ್ಲಿ ವೈಷಮ್ಯ ಹೊಗೆಯಾಡುತ್ತಿತ್ತು. ಆ ಒಂದು ದ್ವೇಷದಿಂದ 13 ಜನ ಆರೋಪಿಗಳು ಸೇರಿಕೊಂಡು ಕಟ್ಟಿಗೆ, ಕಲ್ಲು ಹಾಗೂ ಇಟ್ಟಿಗೆಗಳಿಂದ ಪ್ರದೀಪ ಯಂಟಮಾನನ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ, ಒಟ್ಟು 13 ಜನರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಇದರಲ್ಲಿ 9 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಮಾರ್ಗದರ್ಶನದೊಂದಿಗೆ ನನ್ನ ನೇತ್ರತ್ವದಲ್ಲಿ ಸಿಂದಗಿ ಸಿಪಿಐ ಎಚ್.ಎಮ್.ಪಾಟೀಲ, ಆಲಮೇಲ ಪಿಎಸ್‍ಐಸುರೇಶ ಗಡ್ಡಿ, ದೇವರ ಹಿಪ್ಪರಗಿ ಪಿಎಸ್‍ಐ ರವಿ ಯಡ್ಡೆನವರ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ, ಇನ್ನೂ 4 ಜನ ಆರೋಪಿಗಳನ್ನು ಪತ್ತೆ ಹಚ್ಚಿ ಕೇವಲ ಎರಡು ದಿನದಲ್ಲಿ ಬಂಧಿಸಲಾಗುವದು ಎಂದರು.

ಈ ಸಂದರ್ಭದಲ್ಲಿ ಎಎಸ್‍ಐ ಎಮ್.ಆರ್.ಕಂಚಗಾರ, ಜಿ.ಎಸ್.ಚಕ್ಕಡಿ, ಸಿಬ್ಬಂದಿಗಳಾದ ಎಸ್.ಎಸ್.ಶಿರಶ್ಯಾಡ್, ಎಸ್.ಕೆ.ವಾಘಮೋರೆ, ಪ್ರಭು ಪೂಜಾರಿ, ಎನ್.ಆರ್ ಚೌಧರಿ, ದಸ್ತಗೀರ ತರಫದಾರ, ಪ್ರಕಾಶ ಮೈದರಗಿ, ಸಿದ್ದು ದಿಂಡವಾರ, ಎಸ್.ಎಸ್.ಬಾಪಗೊಂಡ, ಜಿ.ಬಿ.ಗಂಗನಳ್ಳಿ ಇದ್ದರು.

ಬಂಧಿತರು: ಭೀಮು ತಿಪ್ಪಣ ಮೇಲಿನಮನಿ, ಸಂಜು ಸಂಗಪ್ಪ ಮೇಲಿನಮನಿ, ಗೌತಮ ಗಾಲೀಬ ಮೇಲಿನಮನಿ, ಮುತ್ತು ಭೀಮು ಮೇಲಿನಮನಿ, ಪಿಂಟೂ ಸಂಗಪ್ಪ ಮೇಲಿನಮನಿ, ಶಿವಪುತ್ರ ಸಂಗಪ್ಪ ಮೇಲಿನಮನಿ, ವಿರೇಶ ಈರೇಶ ಗುರುರಾಜ ಮೇಲಿನಮನಿ, ಸತೀಶ ಅನೀಲ ಮೇಲಿನಮನಿ, ದೇವು ಅನೀಲ ಮೇಲಿನಮನಿ ಬಂಧಿತ ಆರೋಪಿಗಳಾಗಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group