ಚಿತ್ರದುರ್ಗ- ಪೋಕ್ಸೋ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಶ್ರೀ ಮುರುಘಾ ಸ್ವಾಮೀಜಿಗಳು ಸಾಕ್ಷ್ಯಾಧಾರದ ಕೊರತೆಯ ಕಾರಣದಿಂದ ಖುಲಾಸೆಗೊಂಡಿದ್ದಾರೆ.
ಚಿಕ್ಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀ ಗಳ ವಿರುದ್ಧ ಸಾಕ್ಷ್ಯಾಧಾರ ನೀಡುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಹೇಳಿ ಚಿತ್ರದುರ್ಗದ ಕೋರ್ಟ್ ಅವರನ್ನು ಖುಲಾಸೆ ಮಾಡಿ ಆದೇಶ ನೀಡಿದೆ.
ಮುರುಘಾ ಶ್ರೀಗಳ ಜೊತೆ ಹಾಸ್ಟೆಲ್ ವಾರ್ಡನ್ ರಶ್ಮಿ, ಮಠದ ಮ್ಯಾನೇಜರ್ ಪರಮಶಿವಯ್ಯ, ಅವರನ್ನೂ ಕೂಡ ಖುಲಾಸೆಗೊಳಿಸಲಾಗಿದೆ.
ಆದರೆ ಪ್ರಕರಣ ಕುರಿತು ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಡ್ಯಾನ್ಲಿ ಅವರು ಈ ಪ್ರಕರಣವನ್ನು ಹೈಕೋರ್ಟ್ ಗೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.
ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ ಮಾತನಾಡಿ, ಯಾವ ಅಂಶಗಳ ಆಧಾರದ ಮೇಲೆ ಇವರು ಬಿಡುಗಡೆಯಾಗಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ ಕೋರ್ಟ್ ಆದೇಶದ ಪ್ರತಿ ಕೈಸೇರಿಲ್ಲ. ಅದು ಕೈ ಸೇರಿದ ನಂತರ ಸಂತ್ರಸ್ತ ಮಕ್ಕಳು ಹಾಗೂ ಅವರ ಪೋಷಕರ ಜೊತೆ ಮಾತನಾಡಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.

