ಮುಧೋಳ- ಕಳೆದ 20 ವರ್ಷಕ್ಕೂ ಹೆಚ್ಚು ಕಾಲ ಕಲೆ. ಸಾಹಿತ್ಯ. ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಾ ಬಂದಿರುವ ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಗುರುನಾಥಾರೂಢರ ಮಠದ ಕಾರ್ಯಶ್ಲಾಘನೀಯ ಎಂದು ತಾಲೂಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಣ ಬಾಡಿಗಿ ಅಭಿಪ್ರಾಯ ಪಟ್ಟರು.
ಅವರು ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳನ್ನು ಹಾಗೂ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ. ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳನ್ನು ಗೌರವಿಸಿ ಮಾತನಾಡುತ್ತ ಈ ಬಾರಿ ಜನವರಿ 15 ರಿಂದ 24ರ ವರೆಗೆ 10 ದಿನಗಳ ಕಾಲ ಅದ್ದೂರಿಯಾಗಿ ರಾಜ್ಯಮಟ್ಟದ ಜನಪದ ಸಂಗೀತೋತ್ಸವವನ್ನು ನಡೆಸಲು ನಮ್ಮ ಭಾಗದ ಎಲ್ಲಾ ಕಲಾವಿದರು ಕೈಜೋಡಿಸಬೇಕೆಂದು ಕೇಳಿಕೊಂಡರು.
ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ವಚನ ಸಾಹಿತ್ಯ ಪರಿಷತ್ತು. ಕನ್ನಡ ಸಾಹಿತ್ಯ ಪರಿಷತ್ತು, ಬಸವ ಬಳಗ.ಕನ್ನಡ ಜನಪದ ಪರಿಷತ್ತು .ಕನಾ೯ಟಕ ಜನಪದ ಪರಿಷತ್, ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ, ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವು ಸೇರಿದಂತೆ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸೋಣ ಎಂದು ಹೇಳಿದರು.
ಸಭೆಯಲ್ಲಿ ಸೇರಿದ ಮುಖಂಡರು ಅನುಮೋದಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶರಣಬಸವ ಶಾಸ್ತ್ರಿಗಳು ಮಾತನಾಡಿ ಕಲೆಗಾಗಿ ಜೀವನವನ್ನು ಅರ್ಪಣೆ ಮಾಡಿಕೊಂಡಿರುವ ತೆರೆಮರೆಯಲ್ಲಿರುವ ಕಲಾವಿದರನ್ನು ಸಾಹಿತಿಗಳನ್ನು ಸಂಗೀತಗಾರರನ್ನು ಈ ವೇದಿಕೆಯ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡೋಣ ಎಂದರು.
ಮುಂದುವರಿದು ಮಾತನಾಡುತ್ತಾ ವಿವಿಧ ಕ್ಷೇತ್ರಗಳಲ್ಲಿ ಸೇವೆ ಗೈದಿರುವ ಸಾಧಕರಿಗೆ ಆರೂಢ ಜ್ಯೋತಿ. ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪುರಸ್ಕಾರ. ಬಸವ ಸದ್ಭಾವನಾ ಪ್ರಶಸ್ತಿ. ಜನಪದ ಭೂಷಣ. ಜನಪದ ಮಿತ್ರ. ಮಾಧ್ಯಮ ಮಿತ್ರ. ಸಾಧನ ಸಂಪನ್ನ. ಕಲಾಚೇತನ. ಗುರು ಸೇವಾ ರತ್ನ. ಸ್ವರ ಸಾಮ್ರಾಟ. ಗಾನ ಗಾರುಡಿಗ . ಸಮಾಜ ಸೇವಾ ರತ್ನ .ಸಮಾಜ ಸೇವಾ ಧುರೀಣ. ಸೇರಿದಂತೆ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಕಲಾವಿದರಿಗೆ ನೀಡಲಾಗುವುದು ಎಂದರು ಅಂತಹ ಕಲಾವಿದರು 9972682938-ಹಾಗೂ 9742915714 ಈ ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದರು.
ಹಿರಿಯರಾದ ಬಸವರಾಜ್ ಮೇಟಿ, ನಿವೃತ್ತ ಉಪತಹಸೀಲ್ದಾರ್ ಶಾಮ ಸುಂದರ, ಮಹಾದೇವಪ್ಪ ಮಡಿವಾಳ, ಶಂಕ್ರಪ್ಪ ತಂಬಾಕರದ, ರಾಮಣ್ಣ ಹಡಪದ. ವಿಜಯಕುಮಾರ್ ಕಂಬಾರ್. ಸುನಂದಾ ಲೋಕಾಪೂರ.ಈಶ್ವರ ಹೊರಟ್ಟಿ.ರಾಚಯ್ಯ ವಸ್ತ್ರದ. ಲಕ್ಷ್ಮೀ ಗಾಜಿ. ವಿಠಲ ಬನಾಜಗೋಳ.ನಾರಾಯಣ ಪತ್ತಾರ. ಸೇರಿದಂತೆ ವಿವಿಧ ಭಾಗಗಳಿಂದ ಕಲಾವಿದರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಪಂಚಾಕ್ಷರಿ ಶ್ರೀಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಮೌನಾಚರಣೆಯನ್ನು ಮಾಡಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಶಂಕರಾನಂದ ಶ್ರೀಗಳು ಸಮ್ಮುಖತ್ವವನ್ನು ವಹಿಸಿದ್ದರು.

