ಸಂಗೀತ ವಿಶ್ವ ಭಾಷೆಯಾಗಿದೆ-ಕಂಠೀಕಾರಮಠ

Must Read

ಮೂಡಲಗಿ:-ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಶ್ರೀ ಹನುಮಾನ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ, ಮೂಡಲಗಿ ಹಾಗೂ ಜ್ಞಾನದೀಪ್ತಿ ಫೌಂಡೇಶನ್,ಮೂಡಲಗಿ ಇವುಗಳ ಸಹಯೋಗದಲ್ಲಿ “ವಿಶ್ವ ಸಂಗೀತ ದಿನಾಚರಣೆ”ಕಾರ್ಯಕ್ರಮ ಜರುಗಿತು.

ಸಂಗೀತವು ಪದಗಳಲ್ಲಿ ವ್ಯಕ್ತ ಪಡಿಸಲಾಗದು ಮತ್ತು ಮೌನವಾಗಿರಲು ಸಾಧ್ಯವಾಗದ್ದನ್ನು ಸಂಗೀತ ವ್ಯಕ್ತಪಡಿಸುತ್ತದೆ. ಇಂತಹ ಸಂಗೀತ ಇವತ್ತು ನಮ್ಮನ್ನು ಖಿನ್ನತೆಯಿಂದ, ಚಿಂತೆಯಿಂದ ಮೇಲೆತ್ತಿ ನಮ್ಮನ್ನು ಪರಿಪೂರ್ಣ ವ್ಯಕ್ತಿಯನ್ನಾಗಿಸಿದೆ. ಇದು ವಿಶ್ವ ಭಾಷೆಯಾಗಿ ವಿಜೃಂಭಿಸುತ್ತಿರುವುದು ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸೋಮಶೇಖರಯ್ಯ ಕಂಠೀಕಾರಮಠ ಸಂಗೀತದ ಗುಣಗಾನ ಮಾಡಿ ಹೇಳಿದರು.

ಸಂಗೀತ ಅನ್ನುವುದು ದೊಡ್ಡ ಸಾಗರ,ಕೇಳಲು ಬಹಳ ಇಂಪು-ಕಂಪು,ಕಲಿಯಲು ಬಹಳ ಕಷ್ಟ.ಎಲ್ಲರಿಗೂ ಅಷ್ಟು ಸುಲಭವಾಗಿ ಕಲೆ ದೊರೆಯುವುದಿಲ್ಲ,ಅದಕ್ಕೆಲ್ಲ ಸಾಧನೆ ಮುಖ್ಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ಸಂಜಯ ಶಿಂಧಿಹಟ್ಟಿ ತಮ್ಮ ಅಭಿಪ್ರಾಯ ಹೇಳಿದರು.

ಬಿ.ಆರ್.ತರಕಾರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಂತೋಷ ಪಾಟೀಲ, ತಿಮ್ಮಣ್ಣ ಯಾದವಾಡ,ಅಪ್ಪಣ್ಣ ಮುಗಳಖೋಡ, ವೆಂಕಟೇಶ ಬಡಿಗೇರ, ವೀರಭದ್ರಪ್ಪ ಮೀಲ್ಲಾನಟ್ಟಿ,ಶ್ರೀಮತಿ ಭಾಗೀರಥಿ ಕುಳಲಿ ಉಪಸ್ಥಿತರಿದ್ದರು.

ಪ್ರಶಾಂತ ಮಲ್ಲಗೌಡರ,ಅರ್ಜುನ ಕಾಂಬಳೆ,ಮಾರುತಿ ಗೌಡರ,ಮತ್ತು ಕುಮಾರಿ ಪಲ್ಲವಿ ಕಂಠೀಕಾರಮಠ ಇವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಬಂದಾಂತ ಸಂಗೀತ ಪ್ರೇಮಿಗಳು,ಸಂಗೀತದ ರುಚಿ ಆನಂದದಿಂದ ಅನುಭವಿಸಿದರು.

ಎ.ಎಚ್.ಒಂಟಗೂಡಿ ಸ್ವಾಗತಿಸಿದರು, ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು ಮತ್ತು ಮಹಾವೀರ ಸಲ್ಲಾಗೋಳ ವಂದಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group