ಹರಪನಹಳ್ಳಿಯಲ್ಲಿ ಪತ್ತಾರರ ಸಂಗೀತ ಸುಧೆ

Must Read

ಹರಪನಹಳ್ಳಿ: ತಾಲ್ಲೂಕು ವಿಶ್ವಕರ್ಮ ಸಮಾಜೋದ್ಧಾರಕ ಸಂಘ, ಶ್ರೀ ಕಾಳಿಕಾದೇವಿ ದೇವಸ್ಥಾನ ಜೀಣೋದ್ದಾರ ಸಮಿತಿ, ತಾಲ್ಲೂಕ ವಿಶ್ವಕರ್ಮ ನೌಕರರ ಸಂಘ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳೊಂದಿಗೆ ಕೋಟೆ ಶ್ರೀ ಕಾಳಿಕಾದೇವಿಯ ಪುನರ್ ಪ್ರಾಣ ಪ್ರತಿಷ್ಠಾಪನೆ, ನೂತನ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕೋಟೆ ಕಾಳಿಕಾದೇವಿಯ ಸಭಾ ಭವನ ಉದ್ದಾಟನ ಸಮಾರಂಭದ ಅಂಗವಾಗಿ ನಡೆದ ಶ್ರೀ ಜಗದ್ಗುರು ಶ್ರೀ ಮೌನೇಶ್ವರ ಸ್ವಾಮಿ ಪುರಾಣ ಸಂದರ್ಭದಲ್ಲಿ ಸುಮಧುರ ಸಂಗೀತ ಕಾರ್ಯಕ್ರಮ ಜರುಗಿತು.

ಮಂಗಳವಾರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಹಿಂದುಸ್ತಾನಿ ಗಾಯಕ ಸಂಗೀತ ನ್ಮತ್ಯ ಅಕಾಡಮಿ ಮಾಜಿ ಸದಸ್ಯ ಅಖಂಡೇಶ್ವರ.ಎಂ. ಪತ್ತಾರ ಅವರು ಮೌನೇಶ್ವರ ವಚನ,ಬಸವಣ್ಣನವರ ವಚನ, ಪುರಂದರ ದಾಸರ ಪದ, ಶಿಶುನಾಳ ಶರೀಫರ ಹಾಡುಗಳನ್ನು ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ಸಂಗೀತಾಸ್ತಕರ ಗಮನ ಸೆಳೆದರು.

ಗುಳೇದಗುಡ್ಡದ ಸಂಗೀತ ಶಿಕ್ಷಕಿ ಶ್ರೀಮತಿ ಸುಮಿತ್ರಾ.ಅ.ಪತ್ತಾರ ಅವರು ಬಸವಣ್ಣನವರ ವಚನ, ವಿಜಯದಾಸರ ಪದ ಪುರಂದರ ದಾಸರ ಪದ ಹಾಗೂ ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.

ಸುಮಾರು ಮೂರು ಗಂಟೆಗಳವರೆಗೆ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹರಪನಹಳ್ಳಿ KSRTC ನೌಕರ ಶಂಕರಾಚಾರ್ಯ ಅಕ್ಕಸಾಲಿಗ (ಹಾರ್ಮೋನಿಯಂ). ಹಗರಿಬೊಮ್ಮನಹಳ್ಳಿ ಸಂಗೀತ ಶಿಕ್ಷಕ ರೇವಣ್ಣ ಸಿದ್ದಾಚಾರ್ಯ ವಿಶ್ವ ಕರ್ಮ (ತಬಲಾ) ಸಾಥ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ, ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಪುಜ್ಯಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಅವರು ಜಗದ್ಗುರು ಶ್ರೀ ಮೌನೇಶ್ವರ ಪುರಾಣ ಕಾರ್ಯಕ್ರಮ ನಡೆಸಿದರು. ಶಹಾಪುರ ಮಠದ ಶ್ರೀಗಳು ಗುಳೇದಗುಡ್ಡದ ಸಂಗೀತ ಕಲಾವಿದ ಅಖಂಡೇಶ್ವರ ಪತ್ತಾರ, ಶ್ರೀಮತಿ ಸುಮಿತ್ರಾ ಪತ್ತಾರ,ರೇಮಣ್ಣ ಸಿದ್ದಾ ಚಾರ್ಯ ವಿಶ್ವಕರ್ಮ ಅವರನ್ನು ಸನ್ಮಾನಿಸಿದರು.

ಈ ವೇಳೆಯಲ್ಲಿ ರಥಶಿಲ್ಪಿ ಚನ್ನೇಕೇಶ ಬಡಿಗೇರ, ಶಿಕ್ಷಕ ಪ್ರಕಾಶ ವಿಶ್ವಕರ್ಮ (ಕೂಡ್ಲಿಗಿ) ವಿರೂಪಾಕ್ಷಪ್ಪ ಬಡಿಗೇರ ವೀರ ಭದ್ರಾಚಾರಿ ಅಣ್ಣಪ್ಪ ಚಾರ, ಪಾಂಡು ಬಡಿಗೇರ, ಬಂಡ್ರಿ ಮಲ್ಲಪ್ಪ, ಕಾಳಚಾರ್ಯ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ ವಿಶ್ವಕರ್ಮ ನೌಕರರ ಸಂಘ ಮಹಿಳಾ ಮಂಡಳ ಹಾಗೂ ಕೋಟೆ ಶ್ರೀ ಕಾಳಿಕಾದೇವಿ ವಿವಿಧ ಸಮಿತಿಗಳ ಅಧ್ಯಕ್ಷರು ಸದಸ್ಯರು ಪಟ್ಟಣದ ವಿಶ್ವಕರ್ಮ ಸಮಾಜದ ಮತ್ತು ಬರಡೋಣೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group