spot_img
spot_img

ಮೈಸೂರು ದಸರಾ ವಸ್ತುಪ್ರದರ್ಶನದ  ಸರ್ಕಾರಿ ಮಳಿಗೆಗಳಲ್ಲಿ ಕನ್ನಡದ ಬಗ್ಗೆ ತಾತ್ಸಾರ: ಡಾ.ಭೇರ್ಯ ರಾಮಕುಮಾರ್

Must Read

- Advertisement -

ಮೈಸೂರು ದಸರಾ ವಸ್ತು ಪ್ರದರ್ಶನವು ವಿಶ್ವಪ್ರಸಿದ್ದ. ಜನರಿಗೆ ಶಿಕ್ಷಣ, ಸಂಸೃತಿ, ನಾಡು-ನುಡಿಗಳ ಪರಿಚಯ ಮಾಡಿಕೊಡುವ ಸಲುವಾಗಿಯೇ ಸುಮಾರು ೧೮೮೦ ರಲ್ಲಿ ದಸರಾ ವಸ್ತುಪ್ರದರ್ಶನ ಆರಂಭಗೊಂಡಿತು.

ಆರಂಭದಲ್ಲಿ ಜೀವಣ್ಣರಾಯನಕಟ್ಟೆ ಮೈದಾನದಲ್ಲಿ ಈ ಪ್ರದರ್ಶನ ಆರಂಭಗೊಂಡಿತು. ನಂತರದ ದಿನಗಳಲ್ಲಿ ಇದು ಅರಮನೆಯ ಮುಂಭಾಗಕ್ಕೆ ವರ್ಗಾವಣೆ ಆಯಿತು. ನಂತರ ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು.ಇಂತಹ ಐತಿಹಾಸಿಕ ದಸರಾ ವಸ್ತು ಪ್ರದರ್ಶನದ ಆಯುಷ್ ಹಾಗೂ ಎನ್.ಸಿ.ಸಿ. ವಿಭಾಗದ ಮಳಿಗೆಗಳಲ್ಲಿ ಕನ್ನಡ ಭಾಷೆ ಬಳಕೆ ಬಗ್ಗೆ ತಾತ್ಸಾರ ಮಾಡಲಾಗಿದೆ ಎಂದು ಹಿರಿಯ ಸಾಹಿತಿ, ಪರ್ತಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ದೂರಿದ್ದಾರೆ.

- Advertisement -

ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ್ ಹಾನಗಲ್ ಅವರಿಗೆ ದೂರು ನೀಡಿರುವ ಅವರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರವು ‌ಮಿರ್ಲೆ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ದಸರಾ ವಸ್ತುಪ್ರದರ್ಶನದ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯ ಫಲವಾಗಿ ವಸ್ತುಪ್ರದರ್ಶನದ ಬಹುತೇಕ ಮಳಿಗೆಗಳ ನಾಮಫಲಕಗಳು ಕನ್ನಡ ಭಾಷೆಗೆ ಸ್ಥಾನ ನೀಡಿವೆ. ಇದು ಸಂತಸದ ಸಂಗತಿ. ಆದರೆ ಸರ್ಕಾರಿ ಮಳಿಗೆಗಳ ಸಾಲಿನಲ್ಲಿ ಇರುವ (ಆಯುಷ್ ) ಅಖಿಲ ಭಾರತೀಯ  ವಾಕ್ ಶ್ರವಣ ಸಂಸ್ಥೆಯ ಮಳಿಗೆಯಲ್ಲಿ ಐ ಲವ್ ಅಯುಷ್ ಎಂಬ ಇಂಗ್ಲೀಷ್ ಫಲಕವಿದೆ.

ಈ ಆಯಷ್ ಪ್ರದರ್ಶನ ಕೇಂದ್ರದಲ್ಲಿ ಎಲ್ಲಾ ವಿವರಗಳೂ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿವೆ. ಆದರೆ ಐ ಲವ್ ಆಯುಷ್ ಎಂಬ ಆಂಗ್ಲ ಭಾಷೆಯ ನಾಮಫಲಕ ಕನ್ನಡಿಗರ ಮನಸ್ಸಿಗೆ ನೋವು ಉಂಟು ಮಾಡುತ್ತಿದೆ. ಕೂಡಲೇ ಸದರಿ ನಾಮಫಲಕವನ್ನು ಬದಲಾಯಿಸಿ, ಕನ್ನಡ ಭಾಷೆಯ ನಾಮಫಲಕ ಹಾಕುವಂತೆ ತಾವು ಸದರಿ ಇಲಾಖೆಗೆ ಸೂಚಿಸಬೇಕೆಂದು ಕೋರುತ್ತೇನೆ ಎಂದು ಒತ್ತಾಯಿಸಿದ್ದಾರೆ.

- Advertisement -

ಅದೇ ರೀತಿ ಎನ್.ಸಿ.ಸಿ.(ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಸಂಸ್ಥೆಯ ೭೫ ನೇ ವಾರ್ಷಿಕೋತ್ಸವದ ಅಂಗವಾಗಿ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಇದೀಗ ನಿರ್ಮಾಣವಾಗುತ್ತಿರುವ ಪ್ರದರ್ಶನ ಮಳಿಗೆಯ ಹೊರಭಾಗದಲ್ಲಿ ಸಂಪೂರ್ಣವಾಗಿ ಆಂಗ್ಲ ಭಾಷೆ ಬಳಸಲಾಗಿದೆ ಎಂದವರು ದೂರಿದ್ದಾರೆ.

ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಸದರಿ ಆಯುಷ್ ಮಳಿಗೆಯಲ್ಲಿ’ ನನ್ನ ಪ್ರೀತಿಯ ಆಯುಷ್ ‘ ನಾಮಫಲಕ ಅಳವಡಿಸುವಂತೆ ಸೂಚಿಸಬೇಕು. ಅದೇ ರೀತಿ ಎನ್.ಸಿ.ಸಿ.ಮಳಿಗೆಯ ಹೊರಭಾಗದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಸುವಂತೆ  ಸೂಚಿಸಬೇಕೆಂದು ಎಂದವರು  ಒತ್ತಾಯಿಸಿದ್ದಾರೆ.

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group