spot_img
spot_img

ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ಕರೆಂಟ್ ತಗುಲಿ ಒಂದು ಎತ್ತು ಸಾವು, ರೈತ ಬಚಾವ್

Must Read

- Advertisement -

ಬೀದರ: ಕೈ ಮೇಲೆ ಎತ್ತಿದರೆ ವಿದ್ಯುತ್ ತಂತಿ ತಲುಪುತ್ತದೆ. ಈ ಬಗ್ಗೆ ದೂರು ನೀಡಿದರೆ ತಂತಿಯನ್ನು ಮೇಲೆತ್ತಲು ದುಡ್ಡು ವಸೂಲು ಮಾಡಿದ ಜೆಸ್ಕಾಮ್ ನಿರ್ಲಕ್ಷ್ಯ ತೋರಿದ್ದರಿಂದ ವಿದ್ಯುತ್ ಅವಘಡಕ್ಕೆ ಎತ್ತು ಒಂದು ಬಲಿಯಾಗಿದೆ. ಅದೃಷ್ಟವಶಾತ್ ರೈತ ಬಚಾವಾಗಿದ್ದಾನೆ.

ಬೀದರ್ ತಾಲೂಕಿನ ಶ್ರೀ ಮಂಡಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಜಮೀನಿನಲ್ಲಿ ಕರೆಂಟ್ ತಂತಿ ತೀರಾ ಕೆಳಗೆ ಇದ್ದು ಅದನ್ನು ಮೇಲೆ ಎಳೆದು ಕೊಡಲು ಸರ್ಕಾರಕ್ಕೆ ದಿ.28/1/2012 ರಂದು ಹದಿನಾಲ್ಕು ಸಾವಿರದಾ ಐದು ನೂರು ರುಪಾಯಿ ಶುಲ್ಕ ಪಾವತಿ ಮಾಡಿದ್ದ ರೈತ ಆದರೂ ಜೆಸ್ಕಾಂ ನವರು ಕೆಲಸ ಮಾಡಿರಲಿಲ್ಲ ಎನ್ನಲಾಗಿದೆ.

- Advertisement -

ಹೊಲದಲ್ಲಿ ಕೆಲಸ ಮಾಡುವಾಗ ರೈತ ರಾಮು ಡೊಣೆಯವರ ಕಾಲು ಮತ್ತು ಕೈ ಭಾಗ ಕರೆಂಟ್ ಹತ್ತಿ ಸಂಪೂರ್ಣ ಗಾಯವಾಗಿದ್ದು ಅವರಿಗೆ ಸೇರಿದ್ದ ಎತ್ತು ಸಾವನ್ನಪ್ಪಿದೆ.

ಸ್ಥಳಕ್ಕೆ ಜೆಸ್ಕಾಂ ಅಧಿಕಾರಿ ಭೇಟಿ ನೀಡಿದ ವೇಳೆ ಗಲಾಟೆ ನಡೆದಿದ್ದು ಜೆಸ್ಕಾಂ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.

- Advertisement -

ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group