ನಲಿ ಕಲಿ ಶಿಕ್ಷಕರ ಪ್ರಗತಿ ಪರಿಶೀಲನ ಸಭೆ

Must Read

ಸಿಂದಗಿ: ಕೋವಿಡ್ 19 ರೋಗದ ಲಕ್ಷಣಗಳು ಹೆಚ್ಚು ಕಂಡು ಬಂದಿರುವದರಿಂದ ಎರಡು ವರ್ಷಗಳಿಂದ ಶಾಲೆಗಳು ವಿಳಂಬವಾಗಿ ಪ್ರಾರಂಭವಾಗಿರುವದರಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕಡಿಮೆಯಾಗುತ್ತಾ ಸಾಗಿದೆ ಆದ್ದರಿಂದ ಇಂದು ಶಾಲೆಗಳು ಪುನ: ಆರಂಭಗೊಂಡು ವಿದ್ಯಾರ್ಥಿಗಳ ಕಲಿಕಾ ಮಟ್ಟವು ಸುಧಾರಣೆಯಲ್ಲಿ ಬರುತ್ತಿರುವದು ಸಂತೋಷದ ವಿಷಯವಾಗಿದೆ ಆದ್ದರಿಂದ ನಲಿ ಕಲಿ ಪದ್ದತಿಯಲ್ಲಿ ವಿದ್ಯಾರ್ಥಿಗಳ ವಿಷಯವಾರು ಕಲಿಕಾ ಮಟ್ಟವು ಹೆಚ್ಚಿಸುವಲ್ಲಿ ನಲಿ ಕಲಿ ಶಿಕ್ಷಕರ ಪಾತ್ರ ಹೆಚ್ಚಾಗಿ ಕಾಣಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ಕುಮಾರ ಬೀಳಗಿ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಿ ಆರ್ ಸಿ ಭವನದಲ್ಲಿ ಸೋಮವಾರದಂದು ನಲಿ -ಕಲಿ ಶಿಕ್ಷಕರ ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳ ಪಾಲಕರ ಸಭೆ ಆಯೋಜಿಸಿ ಕೊಂಡು ವಿದ್ಯಾರ್ಥಿಗಳ ಹಾಜರಾತಿ ಹಾಗೂ ಕಲಿಕಾ ಮಟ್ಟವು ಹೆಚ್ಚಿಸಬೇಕು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಹೆಚ್ಚು ಒಡನಾಟ ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿಗಳಿಗೆ ಹೆಚ್ಚು ಮಾತನಾಡಲು ಪ್ರೇರಣೆ ನೀಡಬೇಕು ಅವರಿಗೆ ಗಟ್ಟಿಯಾಗಿ ಓದಲು ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳಿಗೆ ನಲಿ-ಕಲಿ ಪದ್ದತಿಯಲ್ಲಿ ಶಿಕ್ಷಕರು ಬೋಧನೆ ಮಾಡಬೇಕು.ವಿದ್ಯಾರ್ಥಿಗಳಿಗೆ ಹೆಚ್ಚು ಕ್ರಿಯಾತ್ಮಕವಾಗಿ ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸುವಂತೆ ಒಲವು ಮೂಡಿಸಬೇಕು ಎಂದರು.

ವಿಜಯಪುರದ ಜಿಲ್ಲಾ ಶಿಕ್ಷಕರ ತರಬೇತಿಯ (ಡಯಟ್) ಹಿರಿಯ ಉಪನ್ಯಾಸಕ ಸುರೇಂದ್ರ ಕಾಂಬಳೆ ಮಾತನಾಡಿ ಶಿಕ್ಷಕರು ಸತತ ಅಧ್ಯಯನದಲ್ಲಿ ತೊಡಗಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಮಟ್ಟ ಒದಗಿಸಬೇಕು .ಶಿಕ್ಷಕರು ಕಲಿಕೋಪಕರಣಗಳು ಹಾಗೂ ಚಟುವಟಿಕೆ ಮೂಲಕ ಅವರಿಗೆ ಶಿಕ್ಷಣ ನೀಡಬೇಕು ನಲಿ- ಕಲಿ ಪದ್ದತಿಯಲ್ಲಿ ದಿನನಿತ್ಯ ಅವರಿಗೆ ಎಲ್ಲಾ ವಿಷಯಗಳ ಪರಿಕಲ್ಪನೆಗಳನ್ನು ನೀಡಬೇಕು. ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸೃಜನಾತ್ಮಕವಾಗಿ ಬೊಧನೆಯಲ್ಲಿ ತೊಡಗಿದಾಗ ಮಕ್ಕಳ ಕಲಿಕೆ ಪೂರಕವಾಗುತ್ತದೆ ಎಂದರು.

ಶಿಕ್ಷಣ ಸಂಯೋಜಕ ಆನಂದ ಮಾಡಗಿ ಮಾತನಾಡಿ 5ನೆಯ ತರಗತಿ ಓದುತ್ತಿರುವ ಮಕ್ಕಳಿಗೆ ವಿವಿದ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಆವ್ಹಾನಿಸಿದ್ದು ಪಾಲಕರಿಗೆ ಶಿಕ್ಷಕರು ಮಾಹಿತಿ ನೀಡಬೇಕು ಎಂದರು.ಬಿ ಆರ್ ಪಿ ಎಂ.ಎಂ ದೊಡಮನಿ.ಬಿ ಆರ್ ಪಿ ಎಸ್ ಕೆ ಗುಗ್ಗರಿ. ಸಿ ಆರ್ ಪಿ ಎನ್ ಎಸ್ ತಿಳಗೂಳ.ಎಲ್ ಎಸ್ ಪವಾರ. ಭಾಗವಹಿಸಿದರು.

ಸಂಪನ್ಮೂಲ ವ್ಯಕ್ತಿ ಶಿಕ್ಷಕಿ ಶ್ರೀಮತಿ ಅನೂಸೂಯಾ ರಾಯನಗೌಡರ. ಶ್ರೀಮತಿ ಬಸಮ್ಮ ಹಳಕಟ್ಟಿ ನಲಿ-ಕಲಿ ತರಬೇತಿ ನೀಡಿದರು.

ಶಿಕ್ಷಕ ಬಸವರಾಜ ಅಗಸರ ಸ್ವಾಗತಿಸಿ ವಂದಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group