ಗ್ರಾಮೀಣ ಜನತೆಗೆ ನರೇಗಾ ವರದಾನ: ತಾ.ಪಂ ಇಓ ರಾಮು ಅಗ್ನಿ

Must Read

ಸಿಂದಗಿ; ಗ್ರಾಮೀಣ ಜನರಿಗೆ ಹಿಂದುಳಿದ ಎಲ್ಲಾ ಸಮುದಾಯದವರಿಗೆ ವರ್ಷಕ್ಕೆ ಕನಿಷ್ಠ ೧೦೦ ದಿನಗಳ ಕೆಲಸ ಒದಗಿಸಿಕೂಡುವ ಮೂಲಕ ಜನರ ಜೀವನಮಟ್ಟ ಸುಧಾರಿಸಲಾಗುತ್ತಿದೆ ಮತ್ತು ಸಂಗಮ ಸಂಸ್ಥೆಯು ಎಲ್ಲಾ ಜನರಿಗೆ ಸರಕಾರದ ಯೋಜನೆ ಬಗ್ಗೆ ತಿಳಿಸುವ ಮೂಲಕ ಜನರಿಗೆ ಸಬಲರನ್ನಾಗಿ ಮಾಡಿದೆ ಎಂದು ತಾಪಂ ಇಓ ರಾಮು ಅಗ್ನಿ ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದಿ ಕೇಂದ್ರದಲ್ಲಿ ಹಮ್ಮಿಕೂಂಡಿರುವ ನರೇಗಾ ದಿವಸ ಆಚರಣೆ ಹಾಗೂ ಜನವೇದಿಕೆ ನಾಯಕರಿಗೆ ಸಾವಯವ ಕೃಷಿ ಜಾಗೃತಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ಸಹ ನಿರ‍್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಜನರು ವಲಸೆ ಹೋಗುವುದನ್ನು ನಿಲ್ಲಿಸುವ ಉದ್ದೇಶದಿಂದ ಸರ‍್ಕಾರ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭಿಸಿತು ಆದರೆ ಇದು ಕೇವಲ ಒಂದು ವರ‍್ಷಕ್ಕೆ ಸೀಮಿತವಾಗಿದೆ ಎಂದು ಕಂಡು ಬರುತ್ತದೆ ಯಾಕೆಂದರೆ ಗ್ರಾಮೀಣ ಜನರಿಗೆ ೧೦೦ ದಿನ ಉದ್ಯೋಗ ಖಾತ್ರಿ ಅಡಿಯಲ್ಲಿ ಮಾನವ ಕೂಲಿ ಕೆಲಸ ಸಿಗುತ್ತಿಲ್ಲ ಆದ್ದರಿಂದ ಜನವೇದಿಕೆಯ ಮನವಿಗೆ ಸ್ಪಂದಿಸಬೇಕು ಜನರಿಗೆ ಕೆಲಸ ಸಿಗುವ ಹಾಗೆ ಮಾಡಿಕೂಡಬೇಕು ಮತ್ತು ಅಂಗನವಾಡಿ ಸರಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯಗಳು ಮಾಡಿಕೊಡಬೇಕೆಂದು ಒತ್ತಾಯಿಸಿದರು

ರಾಜಕುಮಾರ ಹೊಸಮನಿ ಮಾತನಾಡಿ, ತಮ್ಮ ತಮ್ಮ ಭೂಮಿಯು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ಇಳುವರಿ ಹಾಗೂ ತಮ್ಮ ಜಮೀನಿನ ಸತ್ವ ಕಳೆದುಕ್ಕೊಳ್ಳಬಾರದು ಎಂದರೆ ನೀವುಗಳೆಲ್ಲ ರಾಸಾಯನಿಕ ಗೊಬ್ಬರವನ್ನು ಇಂದೇ ತ್ಯಜಿಸಿ ಸಾವಯವ ಕೃಷಿಕಡೆಗೆ ಹೆಚ್ಚು ಹೆಚ್ಚು ಒತ್ತುಕೊಡಬೇಕು ಅಂದಾಗ ಮಾತ್ರ ನಮ್ಮ ಭೂಮಿಯು ಸತ್ವ ಕೂಡ ಕಳೆದುಕ್ಕೊಳ್ಳುವುದಿಲ್ಲ ಅದೇರೀತಿ ಜನರು ಕೂಡ ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತಾರೆ ಜನರು ಕೆಮಿಕಲ್ ಬಳಸುವುದನ್ನು ಬಿಟ್ಟು ಸಾವಯವ ಗೂಬ್ಬರಗಳನ್ನು ಬಳಸಿ ಜೀವಾಮೃತವನ್ನು ಮನೆಯಲ್ಲೆ ತಯಾರಿ ಮಾಡಿ ಇದರಿಂದ ಉತ್ತಮ ಇಳುವರಿ ಬರುವುದಕ್ಕೆ ಸಾಧ್ಯ ಎಂದರು.

ಮಲಕಪ್ಪ ಶಿವಲಿಂಗಪ್ಪ ಹಲಗಿ ನಿರೂಪಿಸಿದರು. ಬಸವರಾಜ ಬಿಸನಾಳ ಸ್ವಾಗತಿಸಿದರು ಮಹೇಶ ಚವ್ವಾಣ ವಂದಿಸಿದರು ಜನವೇದಿಕೆ ನಾಯಕರು ಮ ಅ ಅ ಗುಂಪುಗಳು ಕಟ್ಟಡ ಕಾರ‍್ಮಿಕರು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group