ರಾಷ್ಟ್ರೀಯ ರೈತ ಕೃಷಿ ದಿನಾಚರಣೆ

Must Read

ಮುನವಳ್ಳಿ : “ ಕೃಷಿ ಕಾರ್ಯವು ಮಾನವಕುಲದ ಅತ್ಯಂತ ಹಳೆಯ ಮತ್ತು ಅಗತ್ಯವಾದ ಉದ್ಯಮವಾಗಿದೆ. ಇದು ಇಡೀ ಸಮಾಜಕ್ಕೂ ಮಾನವ ಜೀವನಕ್ಕೆ ಮುಖ್ಯವಾಗಿದೆ. ಭಾರತದಲ್ಲಿ ಶತಮಾನಗಳಿಂದ ಕೃಷಿ ಪ್ರಧಾನವಾಗಿದೆ. ರೈತರಿಲ್ಲದೇ ಪ್ರಪಂಚದ ಜೀವನ ಮತ್ತು ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ನುಡಿ ಜನಜನಿತವಾಗಿದೆ.” ಎಂದು ಅಂಬರೀಷ್ ಯಲಿಗಾರ ತಿಳಿಸಿದರು.

ಅವರು ರಾಷ್ಟ್ರೀಯ ರೈತ ಕೃಷಿ ದಿನಾಚರಣೆಯ ಅಂಗವಾಗಿ ತಮ್ಮ ಅಂಗಡಿಯ ಸಂಕೀರ್ಣದಲ್ಲಿ ರೈತರ ಸನ್ಮಾನ ಜರುಗಿಸುವ ಮೂಲಕ ರೈತ ಕೃಷಿ ದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಚುಂಚನೂರ ಗ್ರಾಮದ ಪ್ರಗತಿಪರ ರೈತ ಗಿರೆಪ್ಪ ಹಂಜಿ ಮತ್ತು ಮುನವಳ್ಳಿಯ ಪ್ರಗತಿಪರ ರೈತರಾದ ಪಂಚಪ್ಪ ಗುಂಡ್ಲೂರು ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಬರೀಷ ಯಲಿಗಾರ,ಪಂಚಪ್ಪಾ ಹನಸಿ,ಸುಣಗಾರ ಕಿರಣ ಯಲಿಗಾರ ಮುಂತಾದವರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group