ಸಿಂದಗಿ: ಇಡೀ ಜಗತ್ತಿನ ಆಸ್ತಿಗಳನ್ನು ಅಳತೆಗೋಲಿನಿಂದ ಪ್ರಾರಂಭಿಸಿದ ದಿನವಿದು ಅದಕ್ಕೆ ರಾಷ್ಟ್ರಾದ್ಯಂತ ಇಂದು ಎಲ್ಲ ಭೂಮಾಪಕರು ಏ.10 ಭೂಮಾಪನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಭೂದಾಖಲೆಗಳ ಸಹಾಯಕ ನಿರ್ದೇಶಕ ಜಿ.ಬಿ.ವಗ್ಗನ್ನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಭೂದಾಖಲೆಗಳ ಕಾರ್ಯಾಲಯದಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆ ನಿಮಿತ್ತ ಅಳತೆ ಮಾಪನ ಯಂತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು.
ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯದ ಅಧೀಕ್ಷಕ ಎಸ್.ಆರ್.ಅಗಸಬಾಳ ಮಾತನಾಡಿ, 1989 ಏ 10 ರಂದು ವಿಲಿಯಂ ಲ್ಯಾಮಟನ್ ಅವರು ನಿರ್ದಿಷ್ಟವಾದ ಅಳತೆ ಮಾಡುವುದನ್ನು ಕಂಡು ಹಿಡಿದಿದ್ದು ಅಂತಹ ವಿಜ್ಞಾನಿಯನ್ನು ನಾವೆಲ್ಲರು ಸ್ಮರಿಸಲೇಬೇಕು ಏಕೆಂದರೆ ಬ್ರಿಟೀಷರು ಮಾಡಿದ ದಾಖಲೆಗಳನ್ನು ನಾವೆಲ್ಲ ಮುಂದುವರೆಸುತ್ತ ಬರಲಾಗಿತ್ತು ಅದನ್ನು ಅಳತೆಗೋಲಿನಿಂದ ನಿರ್ದಿಷ್ಟವಾದ ಅಳತೆಯನ್ನು ಕಂಡು ಹಿಡಿದು ಸಮನಾದ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ವಿಜ್ಞಾನಿಯನ್ನು ಗುಣಗಾನ ಮಾಡಿದರು.
ಭೂದಾಖಲೆಗಳ ಸಹಾಯಕ ನಿರ್ದೇಶಕರ ದೇವರ ಹಿಪ್ಪರಗಿ ಕಾರ್ಯಾಲಯದ ಉಪಾಸಕ ವ್ಹಿ.ವೈ.ಹಳ್ಳಿ ಮಾತನಾಡಿ, ಭೂಮಾಪನ ಕಾರ್ಯಾಲಯದ ಈ ದಿನ ಒಂದು ದೊಡ್ಡ ಹಬ್ಬವಾಗಿದೆ ಏಕೆಂದರೆ ಮೊದಲು ಭಾರತ ದೇಶದಾದ್ಯಂತ ಕರಾವಾಕ್ಕಾಗಿ ಬ್ರಿಟೀಷರು 1802 ಸೆಂಟ್ ಥಾಮಸ್ ಕ್ಷೇತ್ರದಿಂದ ಲ್ಯಾಂಪ್ಟನ್ ಎನ್ನುವ ಭೂಮಾಪನ ವಿಜ್ಞಾನಿ ಮದ್ರಾಸ್‍ನಿಂದ ಭೂಮಾಪನ ಸರ್ವೆ ಕಾರ್ಯ ಪ್ರಾರಂಭಿಸಲಾಗಿತ್ತು ಅದನ್ನು 1856ರಲ್ಲಿ 29002 ಅಡಿ ಎತ್ತರದ ಅಳತೆ ಮಾಡಿ ಮೌಂಟ್ ಏವರೆಷ್ಟ ಸರ್ವೆಕಾರ್ಯ ಪ್ರಾರಂಭಿಸಿ ಅದಕ್ಕೆ ಮೌಂಟ್ ಏವರೆಷ್ಟ ಎಂದು ಹೆಸರಿಡಲಾಯಿತು. ಹೀಗೆ ಭೂದಾಖಲೆಗಳ ಸರ್ವೇ ಕಾರ್ಯವಿರುವುದರಿಂದಲೇ ಭೂದಾಖಲೆಗಳ ಸಂರಕ್ಷಣೆಯಾಗಿವೆ ಅದಕ್ಕೆ ಅವರನ್ನು ಇಡೀ ಜಗತ್ತಿನಾದ್ಯಂತ ಸ್ಮರಿಸಲು ಏ.10 ಭೂ ಮಾಪನ ಹಬ್ಬವಾಗಿ ಅಚರಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯದ ಉಪಾಸಕ ಎಸ್.ಎಂ.ಬಳೂಂಡಗಿ, ಭೂಮಾಪಕರಾದ ಜಿ.ಎನ್.ಪಾಟೀಲ, ಎಸ್.ಎಸ್.ಹಂಚನಾಳ, ಭಗವಂತ ಗಾಣಗೇರ, ಗಿರೀಶ ಬಿರಾದಾರ, ಎಸ್.ಎಸ್.ತೆಗ್ಗಿಹಳ್ಳಿ, ಪರವಾನಿಗೆ ಭೂಮಾಪಕರಾದ ಶಂಕರಲಿಂಗೇಗೌಡ, ಎಸ್.ಎಲ್. ಹದ್ಲೂರ, ಎಚ್.ವ್ಹಿ.ನಟರಾಜ, ಕುಮಾರ ಚವ್ಹಾಣ, ಲಕ್ಷ್ಮೀ ಪಾಟೀಲ, ರಾಜೇಶ್ವರಿ ಬಿರಾದಾರ, ಉಷಾ ಚಿನಿವಾಲ ಸೇರಿದಂತೆ ಅನೇಕರಿದ್ದರು.