ಸವದತ್ತಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

Must Read

ಸವದತ್ತಿ: ಪಟ್ಟಣದ ಸವಳಬಾವಿ ಓಣಿಯಲ್ಲಿರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ 4 ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.

“ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯ ನಿಯಮದಿಂದ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ಅಂಶವನ್ನು ಜಗತ್ತಿಗೆ ತೋರಿಸಿದ ದಿನ. 1928 ಫೆಬ್ರವರಿ 28 ರಂದು “ರಾಮನ್ ಎಫೆಕ್ಟ್” ಸಂಶೋಧನೆ ವಿಶ್ವದ ಮುಂದೆ ಅನಾವರಣಗೊಂಡ ಪ್ರಯುಕ್ತ ಸದರೀ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ದೇಶಕ್ಕೆ ಪ್ರಥಮ ನೋಬೆಲ್ ಪಾರಿತೋಷಕ ತಂದುಕೊಟ್ಟ ಹೆಮ್ಮೆಯ ವಿಜ್ಞಾನಿ ಸರ್,ಸಿ.ವಿ.ರಾಮನ್ ಅವರು”. ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಹೆಚ್.ಆರ್.ಪೆಟ್ಲೂರ ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ಪ್ರಧಾನ ಗುರುಮಾತೆಯರಾದ ಶ್ರೀಮತಿ.ಎಲ್.ಎನ್.ಗಾಣಿಗೇರ, ಶಿಕ್ಷಕಿಯರಾದ ಶ್ರೀಮತಿ ಆರ್.ಹೆಚ್. ನಾಗನೂರ, ಶ್ರೀಮತಿ.ವಿ.ವಿ. ಸುಬೇದಾರ, ಶ್ರೀಮತಿ. ಎಸ್.ಎಮ್.ಮಲ್ಲೂರ, ಶ್ರೀಮತಿ. ವಿಜಯಲಕ್ಷ್ಮಿ. ಕಮ್ಮಾರ, ಶ್ರೀಮತಿ. ನೀಲಮ್ಮ ಪಟ್ಟಣಶೆಟ್ಟಿ, ಹಾಗೂ ಬಿ.ಎನ್.ಹೊಸೂರ, ಎಸ್.ಎಮ್.ದೀಕ್ಷಿತ, ಜೆ.ಎಸ್. ಗೊರೋಬಾಳ, ಮೊದಲಾದವರು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group