ಮೂಡಲಗಿ: ಭಾರತದ ದಂತಕಥೆ ಹಾಗೂ ಸಾರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಕೊಡುಗೆಯನ್ನು ಗುರುತಿಸಲು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.ಧ್ಯಾನ್ ಚಂದ್ ಅವರು ಇಂದಿನ ಪೀಳಿಗೆಯವರಿಗೆ ಪ್ರೇರಣೆಯಾಗಿದ್ದಾರೆ. ಕ್ರೀಡಾಲೋಕದಲ್ಲಿ ಭಾರತದ ಹಾಕಿ ತಂಡ ಆಧಿಪತ್ಯ ಮೆರೆಯುವಂತೆ ಮಾಡಿದ್ದರು ಎಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಪ್ರೊ. ಶಂಕರ ನಿಂಗನೂರ ಹೇಳಿದರು.
ಅವರು ಕಲ್ಲೋಳಿ ಪಟ್ಡಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ವಿಭಾಗ ಇವುಗಳ ಸಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
1928, 1932 ಮತ್ತು 1936ರ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಧ್ಯಾನ್ ಚಂದ್ ಸಾರಥ್ಯದ ಭಾರತ ತಂಡ ಚಿನ್ನದ ಪದಕಗಳನ್ನು ಗೆದ್ದು ಕೀರ್ತಿ ತಂದಿತ್ತು. ಅಮೋಘ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಿದ್ದ ಧ್ಯಾನ್ ಚಂದ್ ಹಾಕಿ ಲೋಕದಲ್ಲಿ ‘ಮಾಂತ್ರಿಕ’ ಎಂಬ ಬಿರುದನ್ನು ಪಡೆದಿದ್ದಾರೆ ಎಂದರು.
ಪ್ರೊ.ಡಿ.ಎಸ್. ಹುಗ್ಗಿ ಪ್ರತಿಜ್ಞೆ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕ ಬಿ.ಕೆ. ಸೊಂಟನವರ, ಕ್ರೀಡಾ ಕಾರ್ಯದರ್ಶಿ ಬಿ.ಬಿ. ವಾಲಿ, ಡಾ. ಎಂ.ಬಿ. ಕುಲಮೂರ, ಡಾ. ಕೆ.ಎಸ್.ಪರವ್ವಗೋಳ, ಆರ್.ಎಸ್. ಪಂಡಿತ, ವಿ.ವಾಯ್. ಕಾಳೆ, ವಿ.ಪಿ. ಕೆಳಗಡೆ, ಸಂತೋಷ ಬಂಡಿ, ಮಲ್ಲಪ್ಪ ಕರಗಣ್ಣಿ, ಬಿ.ಸಿ. ಮಾಳಿ ಮುಂತಾದವರು ಉಪಸ್ಥಿತರಿದ್ದರು.