ಓಝೋನ್ ಪದರ ಪ್ರಕೃತಿಯ ಜೀವ ರಕ್ಷಕ – ಪ್ರಾಧ್ಯಾಪಕ ಆರ್ ಎಸ್ ಗೌರಿ

Must Read

ಮೂಡಲಗಿ : ಓಜೋನ್ ಪದರವು ಪ್ರಕೃತಿಯಲ್ಲಿರುವ ಜೀವ ರಕ್ಷಕವಾಗಿದ್ದು ಮಾನವನ ಜೀವನದ ಸಕಲ ಕಾರ‍್ಯದ ಮೇಲೆ ಓಜೋನ್ ಪದರದ ಪಾತ್ರ ಬಹುಮುಖ್ಯವಾಗಿದ್ದು ಇಂದು ಓಜೋನ್ ಪದರಿನ ನಾಶಕ್ಕೆ ಮಾನವನ ಸ್ವಾರ‍್ಥ ಕಾರಣವಾಗಿರುತ್ತದೆ ತಂಪು ಪಾನಿಗಳನ್ನು ತಯಾರಿಸಿಕೊಳ್ಳಲು ಬಳಸುವ ಫ್ರಿಡ್ಜ್ ಬೃಹತ್ ಕೈಗಾರಿಕೆಗಳು ಹಾಗೂ ಕಾರುಗಳಲ್ಲಿ ಬಳಸುವ ಎಸಿ ಗಳಲ್ಲಿ ಉತ್ಪತ್ತಿಯಾಗುವ ಹಾನಿಕಾರಕ ಅಂಶಗಳು ಓಝೋನ ನಾಶಕ್ಕೆ ಕಾರಣವಾಗಿದ್ದು ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅಥಣಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಆರ್‌ಎಸ್ ಗೌರಿ ಹೇಳಿದರು

ಪಟ್ಟಣದ ಆರ್ ಡಿ ಎಸ್ ಕಲಾ ವಾಣಿಜ್ಯ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಹಾಗೂ ಐಕ್ಯೂಎಸಿ ಘಟಕಗಳ ಅಡಿಯಲ್ಲಿ ಹಮ್ಮಿಕೊಂಡ ಓಜೋನ್ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಪ್ರಕೃತಿಯಲ್ಲಿ ಮಾನವನು ಮಾತ್ರ ಪ್ರಕೃತಿಯ ವಿರುದ್ಧವಾಗಿ ಜೀವನಶೈಲಿಗಳನ್ನು ರೂಪಿಸಿಕೊಂಡು ಪ್ರಕೃತಿಯ ಹಾನಿಗೆ ಒಂದಿಲ್ಲ ಒಂದು ರೀತಿಯಲ್ಲಿ ಕಾರಣವಾಗುತ್ತಿದ್ದಾನೆ ಮುಂದೊಂದು ದಿನ ಪರಿಸರದಲ್ಲಿ ಓಜೋನ್ ಪದರ ಸಂಪೂರ‍್ಣ ನಾಶವಾಗಿ ಜೀವ ಸಂಕುಲ ಅಳಿವಿನಂಚಿಗೆ ಹೋಗುತ್ತದೆ ಪ್ರತಿಯೊಬ್ಬರು ಈಗಿನಿಂದಲೇ ಪ್ರಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಅಭಿಪ್ರಾಯಪಟ್ಟರು

ಅತಿಥಿಯಾಗಿ ಆಗಮಿಸಿದ್ದ ಅಥಣಿಯ ಸರ‍್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ಶಿವಾನಂದ ನಾವಿ ಮಾತನಾಡಿ ಭೂಮಿ ಹೊಂದಿರುವ ಅದ್ಭುತ ಶಕ್ತಿ ಓಜೋನ್ ಪದರವಾಗಿದ್ದು ಅದನ್ನು ನಾವುಗಳು ಸ್ವಾರ‍್ಥಕ್ಕಾಗಿ ಹಾನಿಗೊಳಿಸುತ್ತಾ ಇರುತ್ತಿದ್ದೇವೆ ಇದರಿಂದ ಭೂಮಿಯ ಮೇಲಿರುವ ನೀರು ಗಾಳಿ ಬೆಳಕು ಸಸ್ಯಗಳು ಪ್ರಾಣಿಗಳು ಸಂಪೂರ‍್ಣವಾಗಿ ನಶಿಸಿ ತನ್ನ ಅಂತ್ಯವನ್ನು ತಾನೇ ಕಂಡುಕೊಳ್ಳುವಂತೆ ಆಗುವುದು ದೂರವಿಲ್ಲ ಈಗಲೇ ಪ್ರಕೃತಿಯ ಪರವಾಗಿ ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದರು

ಕಾಲೇಜು ಪ್ರಾಚಾರ‍್ಯ ಸತೀಶ ಗೂಟೂರೆ ಮಾತನಾಡಿ ಪ್ರಕೃತಿ ಇಂದಲೇ ನಾವು ಬದುಕುತ್ತಿರುವುದು ಸೂರ‍್ಯ ಚಂದ್ರ ಅಷ್ಟೇ ಓಝೋನ್ ಪದರ ಪ್ರಾಮುಖ್ಯತೆ ಹೊಂದಿದ್ದು ಅದರ ಸಂರಕ್ಷಣೆ ಎಲ್ಲರ ಆದ್ಯತೆಯಾಗಿರಬೇಕೆಂದರು

ಕಾರ‍್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಾದ ಸ್ಪರ‍್ತಿ ಈಟಿ ಸುನಿಲ್ ಸತ್ತಿ ಮುತ್ತಣ್ಣ ಒಡೆಯರ್ ರಾಘವೇಂದ್ರ ಮುಕುಂದ ಸಂಜು ಮಂಟೂರ್ ರಾಜು ಪತ್ತಾರ ಕಿರಣ ಪಟ್ಟಣಶೆಟ್ಟಿ ಅಕ್ಷತಾ ಹೊಸಮನಿ ಕವಿತಾ ಮಳಲಿ ಉಪಸ್ಥಿತರಿದ್ದರು
ಕಾರ‍್ಯಕ್ರಮವನ್ನು ಅಕ್ಷತಾ ಬಾನಿ ನಿರೂಪಿಸಿದರು ಪ್ರೀತಿ ಚೌಹಾಣ್ ಸ್ವಾಗತಿಸಿದರು ಸೃಷ್ಟಿ ಬಡಿಗೇರ ವಂದಿಸಿದರು .

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group