ದೇಶದ ನದಿಗಳ ಉಳಿವು-ಸಂರಕ್ಷಣೆ ಮುಖ್ಯವಾಗಿದೆ: ಸಂಗಮೇಶ ನಿರಾಣಿ

Must Read

ಜಮಖಂಡಿ: ದೇಶದಲ್ಲಿ ನದಿಗಳ ಉಳಿವು ಜೊತೆಗೆ ಸಂರಕ್ಷಣೆ ಬಹಳಷ್ಟು ಮುಖ್ಯವಾಗಿದೆ. ನಮ್ಮ ಭಾಗದ ಜೀವನಾಡಿ ಕೃಷ್ಣಾನದಿಯ ಮಹಿಮೆ ಅರಿತುಕೊಳ್ಳಬೇಕಾಗಿದೆ ಎಂದು ಎಂ ಆರ್ ಎನ್.ಸಮೂಹ ಸಂಸ್ಥೆ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿರುವ ಕೃಷ್ಣಾನದಿ ತೀರದಲ್ಲಿ ಕೃಷ್ಣಾರತಿ, ಕೃಷ್ಣ ಪುಣ್ಯಸ್ನಾನ. ಕುಂಭಮೇಳ ಶೋಭಾಯಾತ್ರೆ, ಲೋಕಕಲ್ಯಾಣಕ್ಕೆ ವಿಶೇಷ ಪೂಜೆ ಹೋಮ ಮತ್ತು ಮಾಜಿ ಸಚಿವ ಮುರಗೇಶ ನಿರಾಣಿ ಅವರ 60ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುರಗೇಶ ನಿರಾಣಿ ಅವರ 60ನೇ ವರ್ಷದ ಹುಟ್ಟುಹಬ್ಬದಂದು 60 ನಾಗಾಸಾಧುಗಳ ಆಗಮನದಿಂದ ನಮ್ಮ ನೆಲ ಇನ್ನಷ್ಟು ಪುಣ್ಯಕ್ಷೇತ್ರವಾಗಿದೆ. ನಾಗಸಾಧುಗಳು, ಅಘೋರಿಗಳು, ಸಂತರು, ಸಾಧುಗಳು ಭಾಗವಹಿಸಿದ್ದಾರೆ. ಇಂತಹ ಮಹಾನ ಸಾಧುಸಂತರ ಆಶೀರ್ವಾದ ನಮ್ಮೆಲ್ಲರಿಗೂ ಸದಾಕಾಲ ಲಭಿಸಲಿ. ನಮ್ಮ ನಾಡು ರಕ್ಷಣೆಗೆಗಾಗಿ ದುಡಿದ ಮಹನೀಯರನ್ನು ನೆನಪಿಸಿಕೊಳ್ಳಬೇಕು. ನಿಮ್ಮೆಲ್ಲರ ಮುರಗೇಶ ನಿರಾಣಿ ಅವರು ಮುಂದಿನ 100ವರ್ಷ ಮುಂದಾಲೋಚನೆ ಹೊಂದಿರುವ ದೂರದೃಷ್ಟಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ದೂರದೃಷ್ಟಿ ಯೋಚನೆ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಅವರಿಗೆ ಉದ್ಯೋಗ ನೀಡುವದು. ಅವರೆಲ್ಲರನ್ನು ಪ್ರತಿಷ್ಠಿತ ಉದ್ಯಮಿ ಗಳಾಗಿ ರೂಪಿಸಿ ದೇಶದ ಪ್ರಗತಿಗೆ ಅಳಿಲು ಸೇವೆ ಮಾಡುವ ಮಹತ್ತರ ಯೋಜನೆ ಕೂಡ ಇದೆ ಎಂದರು.

ಹರಿಹರ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ನಾಯಕನಾದವನು ತನ್ನ ಹುಟ್ಟುಹಬ್ಬವನ್ನು ಸಾವಿರಾರು ಸಾಧುಸಂತರನ್ನು ಕರೆಸಿ ತಮಗೆ ಮಾತ್ರವಲ್ಲದೆ ಕೃಷ್ಣ ಭಾಗದ ರೈತರಿಗೂ ದರ್ಶನ ಕಲಿಸಿದ್ದು. ಕಲ್ಪಿಸಿದ್ದು ಮಹತ್ತರ ಕೆಲಸವಾಗಿದೆ. ಕೇವಲ ಒಬ್ಬ ಸಣ್ಣ ಕಬ್ಬು ಬೆಳೆಗಾರರಾಗಿದ್ದವರು ಇಂದು ಬೃಹತ ಉದ್ದಿಮೆದಾರರಾಗಿ ಬೆಳೆದು ಹಲವಾರು ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರತಿನಿತ್ಯ 75 ಸಾವಿರ ಜನರಿಗೆ ಉದ್ಯೋಗ ನೀಡುವ ಮೂಲಕ ಸಾವಿರಾರು ಕುಟುಂಬಗಳ ಆರ್ಥಿಕ ಪ್ರಗತಿಗೆ ಆಧಾರವಾಗಿದ್ದಾರೆ. ಕಾಶಿಯಲ್ಲಿ ಜರುಗುವ ಗಂಗಾರತಿ ರೀತಿಯಲ್ಲಿ ಕರ್ನಾಟಕದ ಎಲ್ಲ ನದಿಗಳಿಗೆ ಅರತಿಗಳು ಆಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ವೇದಿಕೆಯ ಮೂಲಕ ಸರಕಾರಕ್ಕೆ ಮನವಿ ಮಾಡಿದರು.

ಪ.ಪೂ.ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, ಕೈಗಾರಿಕಾ ಕ್ರಾಂತಿಯ ಹರಿಕಾರ ನಿರಾಣಿಯವರು ತಮ್ಮ ಲಾಭದ ಜೊತೆಗೆ ಸಮಾಜಕ್ಕೆ ಎಷ್ಟು ಲಾಭಆಗುತ್ತೆ ಎಂಬುದರ ಬಗ್ಗೆ ವಿಚಾರ ಹೊಂದಿರುವ ವ್ಯಕ್ತಿಯಾಗಿದ್ದಾರೆ ಎಂದರು.

ಹುಕ್ಕೇರಿಯ ಚಂದ್ರಶೇಖರ ಶ್ರೀಗಳು ಮಾತನಾಡಿ, ನಮ್ಮ ನದಿ, ಸಂಪ್ರದಾಯ, ನೆಲ, ಜಲ, ಸಂಸ್ಕೃತಿಯನ್ನು ಬಿಟ್ಟರೆ ನಮಗೆ ಅನಾಹುತ ಕಟ್ಟಿಟ್ಟ ಬುತ್ತಿ. ನದಿಗಳ ಬಗ್ಗೆ ತಿಳಿಸಿಕೊಡಲು ಇಂದು ನಿರಾಣಿ ಕುಟುಂಬ ಕೃಷ್ಣಾ ಪುಣ್ಯಸ್ನಾನ ಮಾದರಿಯಾಗಲಿದೆ ಎಂದರು.

ನಾಗಾಸಾಧು ಅಖಾಡ ಮುಖ್ಯಸ್ಥ ನಂದದೇವಗಿರಿ ಬಾಬಾ ಮಾತನಾಡಿ, ವಾರಣಾಸಿಯ ರೀತಿ ಮಿನಿಕಾಶಿಯನ್ನು ಇಂದು ಹಿಪ್ಪರಗಿಯಲ್ಲಿ ನೋಡುತ್ತಿದ್ದೇವೆ. ಇತಿಹಾಸವಿರುವ ಹಾಗೆ ಇಲ್ಲಿ ಕೃಷ್ಣಯ ಇತಿಹಾಸ ತಿಳಿಸಿದ್ದು ಪುಣ್ಯವಾಗಿದೆ. ಇಂದು ನಾನು ಸಂಕಲ್ಪ ಮಾಡುತ್ತೇನೆ ಮುಂದಿನ ವರ್ಷ ಸಾವಿರಾರು ಸಾಧುಗಳು ಸಮೂಹ ಹರಿದು ಬಂದು ಕ್ಷೇತ್ರವನ್ನು ಮತ್ತಷ್ಟು ಪವಿತ್ರಗೊಳ್ಳಲಿದೆ. ಈ ಭಾಗದ ಕೃಷ್ಣೆ ನಿಮ್ಮೆಲ್ಲರ ಜೀವನಾಡಿ ಇಂದು ಗಂಗೆ ರೀತಿಯಲ್ಲಿ ಕೃಷ್ಣಾರತಿ ಆಗಲಿ ಇದ-ರಿಂದ ಇತಿಹಾಸ ಸೃಷ್ಟಿಯಾಗಲಿ. ಮುಂದೊಂದು ದಿನ ರೈತರೇ ನಮ್ಮ ದೇವರಾಗುತ್ತಾರೆ ಅಂತಹ ರೈತರನ್ನು ಬೆಳಸುವ ಉಳಿಸುವ ಕೆಲಸವಾಗಬೇಕು ಎಂದು ಹಾರೈಸಿದರು

Latest News

ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ

ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ...

More Articles Like This

error: Content is protected !!
Join WhatsApp Group