ಸಿಂದಗಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತದಲ್ಲಿ ಸುಮಾರು 11 ಜನ ಕ್ರಿಕೆಟ್ ಅಭಿಮಾನಿಗಳು ಮೃತಪಟ್ಟಿದ್ದು, ಇದಕ್ಕೆಲ್ಲ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಸಿಂದಗಿ ವಿಧಾನ ಸಭಾ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಹಲ್ಗಾಂವನಲ್ಲಿ ನಡೆದ ದಾಳಿಯ ಕುರಿತು ಭದ್ರತೆ ವೈಫಲ್ಯ ಮತ್ತು ಗುಪ್ತಚರದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಎತ್ತಿತ್ತು. ಈಗ ಜನರೆ ಸ್ಥಾಪಿತ ಸರ್ಕಾರದಲ್ಲಿ ಇಂಟೆಲಿಜೆನ್ಸ್ (intelligence) ಅನ್ನೋ ಪಡೆ ಕೆಲಸ ಮಾಡುವ ಹಾಗೆ ಕಾಣುತ್ತಿಲ್ಲವೆ…! 18 ವರ್ಷದ ಬಳಿಕ ಸಿಕ್ಕ RCB ಗೆಲುವಿನ ಸಂಭ್ರಮವನ್ನು ಕಸಿದುಕೊಂಡ ಅಜ್ಞಾನ ಸರ್ಕಾರ ಮತ್ತು ಅಸಡ್ಡೆ ಕ್ರಿಕೆಟ್ ಕಂಪನಿ. ಕಾರಣ RCB ತಂಡಕ್ಕಿರುವ ಅಭಿಮಾನಿಗಳ ತೀವ್ರತೆ ಗೊತ್ತಿದ್ದರೂ ಸಹ ಗೃಹ ಸಚಿವರಿಗೆ ಗುಪ್ತಚರದ ಮಾಹಿತಿ ದೊರೆತಿಲ್ಲವೆ ಇದು ಭದ್ರತೆ ವೈಫಲ್ಯ ಅಲ್ಲವೇ ಆತುರದಲ್ಲಿ ವಿಜಯೋತ್ಸವ ಮಾಡಿದ ಸರ್ಕಾರ ಮತ್ತು RCB ಕ್ರಿಕೆಟ್ ವ್ಯವಸ್ಥಾಪಕರು ನೇರ ಹೊಣೆಗಾರರು…. ರಾಜ್ಯ ಸರ್ಕಾರ ಸೂಕ್ತ ಬಂದೋಬಸ್ತ್ ಮಾಡದೆ ಸಂಭ್ರಮಾಚರಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಇಂತಹ ಕಾರ್ಯಕ್ರಮ ಕೈಗೆತ್ತಿಕೊಂಡು ಅನುಮತಿ ನೀಡಿದ್ದು ದೊಡ್ಡ ತಪ್ಪು. ಕ್ರಿಕೆಟ್ ಅಭಿಮಾನಿಗಳ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊರಬೇಕು. ಸಿಎಂ ಸಿದ್ದರಾಮಯ್ಯನವರು 10 ಲಕ್ಷ ಪರಿಹಾರ ಘೋಷಿಸಿದ್ದಾರೆ ಅದರಲ್ಲಿ ಕೆಲವು ಕುಟುಂಬಗಳ ಕುಟುಂಬಕ್ಕೆ ಆದರ ಸ್ಥಂಭವಾದವರೆ ಅಸುನೀಗಿದ್ದ ಎಲ್ಲಾ ಕುಟುಂಬದವರಿಗೆ ಕೂಡಲೇ ಸರ್ಕಾರ ತಲಾ 25 ಲಕ್ಷ ಪರಿಹಾರ ಬಿಡುಗಡೆ ಗೊಳಿಸಬೇಕು ಹಾಗೆಯೇ ಗಾಯಗೊಂಡವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.