- Advertisement -
ಮೂಡಲಗಿ – ಗಣರಾಜ್ಯೋತ್ಸವದ ನಿಮಿತ್ತ ನಗರದ ಗಾಂಧಿ ಚೌಕದಲ್ಲಿ ತಾಲೂಕಾಡಳಿತದಿಂದ ರಾಷ್ಟ್ರಧ್ವಜಾರೋಹಣ ನೆರವೇರಿದ್ದು ರಾಷ್ಟ್ರಧ್ವಜವು ಸ್ವಲ್ಪ ಕೆಳಕ್ಕೆ ಜರಿದು ಮುದ್ದೆಯಾಗಿರುವ ಆಭಾಸಕರ ಘಟನೆ ಜರುಗಿದೆ.
ಇಲ್ಲಿನ ಗಾಂಧಿ ಚೌಕದಲ್ಲಿ ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಇಡೀ ತಾಲೂಕಾಡಳಿತವೇ ಹಾಜರಿದ್ದು ಧ್ವಜವು ಕೆಳ ಮಟ್ಟಕ್ಕೆ ಹಾರಿದ್ದು ಯಾರ ಗಮನಕ್ಕೂ ಬರದೇ ಇರುವುದು ವಿಪರ್ಯಾಸವೆನ್ನಬಹುದು.