spot_img
spot_img

ಯುವಜನಾಂಗಕ್ಕೆ ಇಷ್ಟವಾಗುವತ್ತ “ಬ್ರ್ಯಾಂಡೆಡ್ ಲವ್”

Must Read

spot_img
- Advertisement -
  • ಸಿದ್ದು ಅಭಿನಯದ “ಬ್ರ್ಯಾಂಡೆಡ್ ಲವ್” ಬಿಡುಗಡೆ
  • ಪ್ರೇಮಿಯ ಪ್ರೀತಿ, ತಂದೆಯ ನೀತಿ ಇದುವೇ “ಬ್ರ್ಯಾಂಡೆಡ್ ಲವ್”

ಬ್ರ್ಯಾಂಡೆಡ್ ಲವ್” ಇದು ಹೊಸ ಪ್ರತಿಭೆಗಳು ಸೇರಿ ತಯಾರಿಸಿರುವ ಹೊಸ ಕಿರುಚಿತ್ರ ಈ ಹಿಂದೆ ಮಿಸ್ಟರ್ ಜೈ ಎನ್ನುವ ಕಿರುಚಿತ್ರ ನಿರ್ದೇಶನ ಮಾಡಿರುವ ಸಿದ್ದು ನಟಿಸಿ ನಿರ್ದೇಶಿಸಿದ ಕಿರುಚಿತ್ರ “ಬ್ರ್ಯಾಂಡೆಡ್ ಲವ್”

ಇದೇ ಶುಕ್ರವಾರ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದಂತಹ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಕಿರುಚಿತ್ರಕ್ಕೆ. ಇನ್ನೂ ಈ ಕಿರುಚಿತ್ರದ ಕಥೆ ಅಂತ ಬಂದರೆ ಹೆತ್ತ ತಂದೆ ಮಗನ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕನಸುಗಳನ್ನು, ಮಗನ ಆಸೆಗಳ ಮೇಲೆ ಹೇರಿ, ಪುತ್ರನ ಚಿಗುರುಗನಸನ್ನು ಹೊಸಕಿ ಹಾಕುತ್ತಾನೆ. ಆದರೆ ಬೆಳೆದು ದೊಡ್ಡವನಾದ ಮಗನು, ತಂದೆಯ ಮಮತೆ ಅರಿಯದೆ ವಯೋಸಹಜ ಪ್ರೇಮಕ್ಕೆ ವ್ಯಾಮೋಹಿತನಾಗಿ ತನ್ನ ತಂದೆಯ ಅಪೇಕ್ಷೆಗಳನ್ನು ಗಾಳಿಗೆ ತೂರಿ, ತನ್ನಾಸೆಯಂತೆ ಬದುಕಲು ಬಿಡದ ತಂದೆಯನ್ನು ವಿರೋಧಿಸಿ ನಡೆದು, ಮುಂದೊಂದು ದಿನ ಪ್ರೇಯಸಿಯ ಪ್ರೇಮ ವೈಫಲ್ಯದಿಂದ, ತಂದೆಯ ಅನುರಾಗ ಹಂಬಲಿಸಿ ಬಂದಾಗ, ಪ್ರೀತಿ ನೀಡೋ ತಂದೆಯೇ ಮರೆಯಾಗಿರುತ್ತಾನೆ. ಕೇವಲ ಸ್ಟೈಲ್, ಶೋಕಿ, ಎಂದು ನಡೆದು ಅಮೂಲ್ಯವಾದ ಸಮಯ ಕಳೆದ ಮಗನಿಗೆ, ಕಾಲವು ತನ್ನ ಮೌಲ್ಯವನ್ನು ತಿಳಿಸಿ. ಅವನಿಗೆ ಬೇಕಾದ ನಿಜವಾದ ಪ್ರೀತಿಯನ್ನು ಒದಗಿಸಿ, ಆ ಪ್ರೀತಿಗೆ ತನ್ನದೇ ಆದ ನೈತಿಕ ಮೌಲ್ಯಗಳನ್ನು, ಪವಿತ್ರತೆಯನ್ನು ಹಾಗೂ ನಿಜವಾದ ಜೀವನಾನುಭವವನ್ನು ನೀಡುತ್ತದೆ.

- Advertisement -

ಇಲ್ಲಿ ಸಿದ್ದು ಅವರ ಕಥೆ-ಚಿತ್ರಕತೆ-ಸಂಭಾಷಣೆ, ಸಾಹಿತ್ಯ, ನಿರ್ದೇಶನ ಅದ್ಭುತವಾಗಿ ಮೂಡಿ ಬಂದಿದೆ. ಇಂದಿನ ಯುವಜನಾಂಗಕ್ಕೆ ಅನಿವಾರ್ಯವಾದ ಹಾಗೂ ಪರಿಣಾಮಕಾರಿಯಾದ ಸಂದೇಶವನ್ನು ಈ ಕಿರುಚಿತ್ರ ನೀಡಿದೆ. ಈ ಚಿತ್ರ ಎಲ್ಲಾ ಜನ-ಸಾಮಾನ್ಯರ ಮನಸ್ಸು ಗೆಲ್ಲುವುದರಲ್ಲಿ ಎರಡನೇ ಮಾತೇ ಇಲ್ಲ. ಎಚ್ ಎಮ್ ಸಿದ್ದು ನಾಯಕನಟನಾಗಿ ಅಭಿನಯಿಸುವುದರ ಮೂಲಕ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ತಾರಾಬಳಗದಲ್ಲಿ ನಾಯಕಿ ನಟಿಯಾಗಿ ಸುಪ್ರೀತಾ, ತಂದೆ ಪಾತ್ರದಲ್ಲಿ ಮೈಕೋ ಮಂಜು, ತಂದೆಯ ಸ್ನೇಹಿತರ ಪಾತ್ರದಲ್ಲಿ ಸಿದ್ಧಾರ್ಥ್ ಕಲ್ಯಾಣಕರ್, ವೆಂಕಟೇಶ ರಾವ್, ಸ್ನೇಹಿತೆಯ ಪಾತ್ರದಲ್ಲಿ ಚಿತ್ರಾ, ಸ್ನೇಹಿತನ ಪಾತ್ರದಲ್ಲಿ ಉಮಾಪತಿ, ಶಿವು ಸಿರಿಗೆರೆ, ರಮೇಶ್ ಭಟ್, ದೀಪು ಸೋಮರಾಜ್, ಕಲಾ ಯೋಗಿ, ಸಂತೋಷ್ ಕುಲಕರ್ಣಿ, ಮೋಹನ್ ಎಂ.ಎಸ್ , ಜಿತೇಶ್ ಡಿ ಗೌಡ, ಅಭಿಷೇಕ್ ಎಂ ಮುರಡ ಹಾಗೂ ಮುಂತಾದವರು ಅಭಿನಯಿಸಿದ್ದಾರೆ. ಸಿನಿ ಪ್ಯಾಲೇಸ್ ಸಂಸ್ಥೆಯ ಅಡಿಯಲ್ಲಿ, ಮನು ಬಿ.ಕೆ ಅವರ ಛಾಯಾಗ್ರಹಣ, ಅಕ್ಷಯ್, ರಿಷಬ್ ಅವರ ಸಂಗೀತ, ಭರಾಟೆ ಖ್ಯಾತಿಯ ಪ್ರಮೋದ್ ಸೋಮರಾಜು ಅವರ ಸಂಕಲನ, ವಿಎಫ್ಎಕ್ಸ್ ದರ್ಶನ್ ಶೆಟ್ಟಿ, ಕಲರಿಸ್ಟ್ ಅಮೀತ್, ಎಸ್ಎಫ್ಎಕ್ಸ್ ಆಹೋರಾತ್ರ ಸ್ಟೂಡಿಯೋಸ್, ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ಅರವಿಂದ್ ಮೆನನ್, ನಿರ್ದೇಶನ ವಿಭಾಗದಲ್ಲಿ ಸಂದೀಪ್ ಬಿ.ಯು, ಆನಂದ್ ಕಾಂತಿ, ಪ್ರಶಾಂತ್, ಮೇಕಪ್ ಅನೀಲ ಹಾಗೂ ಅರುಣ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ,ಬಾ ಡಾ ವಿರೇಶ್ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಟಿ ಮಲಗೊಂಡ ಹಾಗೂ ಮುಂತಾದ ತಾಂತ್ರಿಕ ಬಳಗ ಈ ಕಿರುಚಿತ್ರಕ್ಕಿದೆ. ಈ “ಬ್ರಾಂಡೆಡ್ ಲವ್” ಕಿರುಚಿತ್ರಕ್ಕೆ ದೇವರು ಶುಭವನ್ನುಂಟು ಮಾಡಲಿ ಎಂಬುದು Times of ಕರ್ನಾಟಕ ದ ಆಶಯ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು ನೀನೆಂದು ಮಾಡದಿರು ಕೆಟ್ಟದೆಂದು ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು ಧರ್ಮಗಳ‌ ತಿರುಳೊಂದೆ - ಎಮ್ಮೆತಮ್ಮ  ಶಬ್ಧಾರ್ಥ ತಿರುಳು = ಸಾರ ತಾತ್ಪರ್ಯ ಧರ್ಮದ ಹತ್ತು‌ ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ. "ಧೃತಿ ಕ್ಷಮಾ...
- Advertisement -

More Articles Like This

- Advertisement -
close
error: Content is protected !!
Join WhatsApp Group