ತಾಲೂಕಾ ಉರ್ದು ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ

Must Read

ಸಿಂದಗಿ: ಸಂಘಟನೆಯಲ್ಲಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದವರಿಗೆ ಹುದ್ದೆಗಳು ಹುಡುಕುತ್ತ ಬರುತ್ತವೆ. ನಮ್ಮ ನಿರ್ಧಾರ ಸ್ಪಷ್ಟವಾಗಿಟ್ಟುಕೊಂಡು ಕಾಯಕವೇ ಕೈಲಾಸವೆಂದು ಶ್ರಮಿಸಬೇಕು ಎಂದು ಶಿಕ್ಷಕರ ಸಂಘದ ಮುಖಂಡ, ಉರ್ದು ಶಿಕ್ಷಕಕರ ಸೊಸೈಟಿಯ ಅಧ್ಯಕ್ಷ ಯು ಐ ಶೇಖ ಹೇಳಿದರು.

ಪಟ್ಟಣದ ಉರ್ದು ಶಿಕ್ಷಕರ ಸೊಸೈಟಿ ಸಭಾ ಭವನದಲ್ಲಿ ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲ ತಾಲೂಕು ಉರ್ದು ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಕ್ರೀಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕು ವೃತ್ತಿ ಬದ್ಧತೆ ನಮ್ಮ ಆದ್ಯತೆಯಾಗಬೇಕು ಸದಾ ಶಿಕ್ಷಕರ ಸಮಸ್ಯೆಗಳಿಗೆ ದ್ವನಿಯಾಗುತ್ತ ಸ್ಪಂದಿಸಬೇಕು ಎಂದು ಕರೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಉರ್ದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕೋಶಾಧ್ಯಕ್ಷ ಸಯ್ಯದ ಜುಬೇರ ಕೆರೂರ ಮಾತನಾಡಿ, ಉರ್ದು ಶಿಕ್ಷಕರ ಸಮಸ್ಯೆಗಳಿಗೆ ಗಮನದಲ್ಲಿಟ್ಟುಕೊಂಡು ಸಂಘಗಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬ ಪದಾಧಿಕಾರಿಗಳು ಶಿಕ್ಷಕರ ಒಡನಾಡಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಎ ಎಚ್ ವಾಲೀಕಾರ, ದೇವರಹಿಪ್ಪರಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಬೂಲ್ ಕೊಕಟನೂರ, ರಾಯಪ್ಪ ಇವಣಗಿ, ಎಂ ಎಚ್ ಮರ್ತೂರ ಮಾತನಾಡಿದರು.

ನಂತರ ಸಿಂದಗಿ ದೇವರಹಿಪ್ಪರಗಿ ಆಲಮೇಲ ಮೂರು ತಾಲೂಕುಗಳ ಉರ್ದು ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಜೊತೆಗೆ ಅಭಿನಂದನಾ ಕಾರ್ಯಕ್ರಮ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿಮಿತ್ಯ ಶಿಕ್ಷಕ ಕಬೂಲ್ ಕೊಕಟನೂರ ಅವರಿಗೆ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಮ್ ಎಸ್ ಚೌಧರಿ, ನಿಜು ಮೇಲಿನಕೇರಿ, ಸಿ ಬಿ ಗಡಗಿ, ಅಲ್ತಾಪ ಸಾಲೋಟಗಿ, ಎಂ ಡಿ ಮಳಖೇಡ, ಝಡ್ ಎಸ್ ಬಗಲಿ, ಝಡ್ ಎಸ್ ಮನಿಯಾರ, ಗುಲಾಬ ನದಾಫ, ಫಕ್ರುದ್ದೀನ್ ನದಾಫ, ಪಿ ಎಮ್ ಪಟೇಲ್, ಡಿ ಎಲ್ ಮರ್ತೂರ, ಎ ಡಿ ಖಾನಗೌಡ, ಕೆ ಡಿ ಭೂಸನೂರ, ಎಂ ಎಚ್ ಮಣೂರ, ರಹಮತುಲ್ಲಾ ನಾಯ್ಕೋಡಿ, ಡಿ ಎಚ್ ಚೌಧರಿ, ಎಂ ಎಂ ಅರಬ್ ಸೇರಿದಂತೆ ಮೂರು ತಾಲೂಕಿನ ಉರ್ದು ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group