ಬೀದರ– ರಾಜ್ಯದಲ್ಲಿ ಬಹುಮತದಿಂದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಇಷ್ಟರಲ್ಲಿಯೇ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಿ ಡಿಕೆಶಿ ಮುಖ್ಯಮಂತ್ರಿ ಯಾಗುತ್ತಾರೆ ಎನ್ನುವ ಕೂಗು ಕೇಳಿಬರುತ್ತಿರುವ ಜೊತೆಯಲ್ಲಿಯೇ ಬೀದರ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಮುಖ್ಯಮಂತ್ರಿ ಯಾಗಬೇಕೆಂಬ ಘೋಷಣೆಗಳು ಕೇಳಿಬಂದಿವೆ.
ಬೀದರ ಜಿಲ್ಲೆಯ ಬೇಲೂರು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಪರ ಜಯಘೋಷ ಕೂಗುತ್ತಾ ಈಶ್ವರ ಖಂಡ್ರೆಯೇ ಮುಂದಿನ ಮುಖ್ಯಮಂತ್ರಿ ಎಂದರಲ್ಲದೆ ಬೀದರ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಕೂಡ ಹಾಕಿದರು.
ಕಾಂಗ್ರೆಸ್ ಪಕ್ಷದಲ್ಲಿ ಮೂವತ್ತೈದು ಶಾಸಕರು ಲಿಂಗಾಯತರುಗೆದ್ದಿದ್ದಾರೆ .ಶಾಮನೂರು ಶಿವಶಂಕರಪ್ಪ ಹಿರಿಯರು ಲಿಂಗಾಯತ ಶಾಸಕರ ಬೆಂಬಲ ಪಡೆದು ಮೈದಾನಕ್ಕೆ ಇಳಿಯುತ್ತಾರೆ. ಶಾಮನೂರು ಜೊತೆ ಒಳ್ಳೆಯ ಒಡನಾಟ ಸ್ನೇಹ ಸಂಬಂಧ ಹೊಂದಿರುವ ಖಂಡ್ರೆ ಲಿಂಗಾಯತರ ಬಲದಿಂದ ಮುಖ್ಯಮಂತ್ರಿಯಾಗಬೇಕೆಂಬುದು ಕಾರ್ಯಕರ್ತರ ಒತ್ತಡ. ರಾಜ್ಯದಲ್ಲಿ ಲಿಂಗಾಯತ ಶಾಸಕರು ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡುತ್ತಾರೆಯೋ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ