ಮುಧೋಳ -_ಸಾಮಾಜಿಕ ಕಾಯ೯ಕತ೯. ಉದಯೋನ್ಮುಖ ಪ್ರತಿಭೆ ಮುಗಳಖೋಡದ ನಿಂಗನಗೌಡ ಮಂಟೂರ [ಗೌಡ್ರು] ಅವರು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಕಾಯಾ೯ಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಆದೇಶ ಹೊರಡಿಸಿದ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರು ಧಾರ್ಮಿಕ. ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಮಾಡಲು ತಿಳಿಸಿ ಬಡವರ, ದೀನ ದಲಿತರ. ಅಂಧ ಅನಾಥರ ಬದುಕಿಗೆ ಸಹಾಯ ಸಹಕಾರ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.ಕಾಯಾ೯ಧ್ಯಕ್ಷರಾಗಿ ನೇಮಕಗೊಂಡ ನಿಂಗನಗೌಡ ಅವರನ್ನು ಶುಕ್ರವಾರ.ದಿ .19 ರಂದು ರಾತ್ರಿ 8.30 ಕ್ಕೆ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆಯುವ ಕೃಷ್ಣಾವತಾರಿ, ಭಕ್ತವತ್ಸಲ, ಅನ್ನದಾನೇಶ್ವರ ಅಪ್ಪಾಜಿ ಅವರ ಹುಟ್ಟು ಹಬ್ಬದ ಸಂಭ್ರಮ ಕಾರ್ಯಕ್ರಮದಲ್ಲಿ ಆದೇಶ ಪತ್ರ , ಶಾಲು ಮಾಲೆ, ಫಲ, ಪುಷ್ಪ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಮುಖಂಡ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

