ವೃಕ್ಷ ಮಾತೆಯ ಅಗಲಿಕೆಗೆ ಕಂಬನಿ ಮಿಡಿದು ಸಂತಾಪ ಸೂಚಿಸಿದ ನಿಪ್ಪಾಣಿ ಕನ್ನಡಪರ ಸಂಘಟನೆಗಳು

Must Read

ಕನ್ನಡ ನಾಡಿನ ಧೀಮಂತ ಆದಶ೯ ವ್ಯಕ್ತಿತ್ವ,ಪರಿಸರ ಪ್ರೇಮಿ, ಗಿಡಗಳ ತಾಯಿ, ಜೀವನದುದ್ದಕ್ಕೂ ಗಿಡಮರಗಳನ್ನು ಬೆಳೆಸಿ ಮಕ್ಕಳಂತೆ ಸಾಕಿದ ತಾಯಿ ವೃಕ್ಷ ಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅಗಲಿಕೆ ನಿಮಿತ್ತ ನಿಪ್ಪಾಣಿ ನಗರದ ದಾನಮ್ಮ ಶಾಲೆಯ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ಜರುಗಿತು.

ತಾಯಿಯ ಸಾಥ೯ಕ ಬದುಕಿನ ಯಶೋಗಾಥೆ ಹೇಳಿ ಸಾವಿರಾರು ಗಿಡಗಳನ್ನು ಬೆಳೆಸಿದ ತಾಯಿ ವೃಕ್ಷ ಮಾತೆಯ ಅಗಲಿಕೆಗೆ ಸಂತಾಪ ಸೂಚಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಪರವಾಗಿ ಕನಾ೯ಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಮಿಥುನ ಅಂಕಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಈರಣ್ಣ ಶಿರಗಾಂವೆ ಮಾತನಾಡಿ ಕಂಬನಿ ಮಿಡಿದು ತಾಯಿಯ ಅಗಲಿಕೆಯಿಂದ ಕನ್ನಡನಾಡು ಬಡವಾಯಿತು ಎನ್ನುತ ಶ್ರದ್ಧಾಂಜಲಿ ಸಲ್ಲಿಸಿದರು.  ತದನಂತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆಯೊಂದಿಗೆ ತಾಯಿಯ ಆತ್ಮಕ್ಕೆ ಶಾಂತಿಕೋರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಶಿವಾನಂದ ಪುರಾಣಿಕಮಠ, ಗಡಿನಾಡು ಕನ್ನಡ ಬಳಗದ ಅಧ್ಯಕ್ಷ  ಮಹಾದೇವ ಬರಗಾಲೆ,ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಮಾರುತಿ ಕೊಣ್ಣುರಿ, ಗಡಿನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ  ರಾಜು ನಾಯಿಕ ಸಹಿತ ಎಲ್ಲ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group