ನಿಪ್ಪಾಣಿಯ ಗಡಿ ಕನ್ನಡ ಹೋರಾಟಗಾರ, ಕ್ರಿಯಾಶೀಲ ಪ್ರಾಧ್ಯಾಪಕ, ಅಜಾತಶತ್ರು ,ಸಾವಿರಾರು ಯುವಕರಿಗೆ ಕನ್ನಡದ ದೀಕ್ಷೆ ನೀಡಿ ಗಡಿ ಕನ್ನಡದ ಕಾವಲುಗಾರ ಎಂದೇ ಖ್ಯಾತಿ ಪಡೆದಿರುವ ಪ್ರೊ. ಮಿಥುನ ಅಂಕಲಿ ಅವರಿಗೆ ಬೆಳಗಾವಿ ಕನ್ನಡ ಭದ್ರಕೋಟೆ ನಾಗನೂರು ರುದ್ರಾಕ್ಷಿಮಠದ ವತಿಯಿಂದ ನೀಡುವ ಕನ್ನಡ ನುಡಿ ಶ್ರೀ ಪ್ರಶಸ್ತಿ ಲಭಿಸಿದೆ.
ಪ್ರೊ. ಮಿಥುನ ಅಂಕಲಿ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಹೋರಾಟಗಾರರಾಗಿ ಕನ್ನಡ ಕ್ರಿಯಾಶೀಲ ಪ್ರಾಧ್ಯಾಪಕರಾಗಿ ಛಾಪು ಮೂಡಿಸಿದ್ದಾರೆ. ನಿಪ್ಪಾಣಿ ಗಡಿಯ ವಿವಿಧ ಕನ್ನಡ ಸಂಘಟನೆಗಳ ಸಾರಥ್ಯ ವಹಿಸಿ ಸೇವೆ ಸಲ್ಲಿಸಿದ್ದಾರೆ. ಇದೀಗ ನಿಪ್ಪಾಣಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ, ಗಡಿನಾಡು ಕನ್ನಡ ಬಳಗದ ಕಾಯ೯ದಶಿ೯, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾವಿರಾರು ಯುವಕರ ಕನ್ನಡದ ಕಣ್ಮಣಿಯಾಗಿ ಗಡಿ ಕಾವಲುಗಾರನಾಗಿ ನುಡಿ ರಕ್ಷಿಸುತ್ತಾ ಕ್ಷಣ ಕ್ಷಣದ ಸುದ್ದಿಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ. ಕನ್ನಡಪರ ಹೋರಾಟಗಾರರಾಗಿ ನಿಪ್ಪಾಣಿ ಯಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ಜಾಗೃತ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅನುಪಮ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಡಿಸೆಂಬರ್ 5 ರಂದು ಸಂಜೆ 5:00 ಗಂಟೆಗೆ ಶ್ರೀ ಮಠದಲ್ಲಿ ನಡೆಯುವ ಕಾಯಕಯೋಗಿ ಮಹಾಪ್ರಸಾದಿ ಡಾ.ಶಿವಬಸವ ಮಹಾಸ್ವಾಮಿಗಳ 134 ನೇ ಜಯಂತಿ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.