ಪ್ರಿಯಾಂಕ್ ಖರ್ಗೆ ರಾಜೀನಾಮೆ ಪ್ರಮೇಯವೇ ಇಲ್ಲ – ಶಾಸಕ ಮನಗೂಳಿ

Must Read

ಸಿಂದಗಿ: ಬೀದರನ ಗುತ್ತಿಗೆದಾರ ಸಚಿನ ಆತ್ಮಹತ್ಯೆ ಪ್ರಕರಣದಲ್ಲಿ ಪಂಚಾಯತ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಅವರ ಪಾತ್ರವಿಲ್ಲ ಅಲ್ಲದೆ ಗುತ್ತಿಗೆದಾರನ ಡೆತ್ ನೋಟ್‌ದಲ್ಲಿ ಖರ್ಗೆಯವರ ಹೆಸರು ಎಲ್ಲಿಯೂ ನಮೂದಾಗಿಲ್ಲ ಸಚಿವ ಸ್ಥಾನಕ್ಕೆ ರಾಜೆನಾಮೆ ಕೊಡುವ ಪ್ರಮೆಯವೇ ಇಲ್ಲ ಬಿಜೆಪಿಗರಿಗೆ ಜ್ಞಾನಇದೇಯೇ ಇಲ್ಲವೋ ಎನ್ನುವ ಭಾವನೆ ಬರುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರ ಸಾಮಾಜಿಕ ನ್ಯಾಯದಡಿ ಅತ್ಯಂತ ಪಾರದರ್ಶಕವಾಗಿ ಆಡಳಿತ ನಡೆಸುತ್ತಿರುವ ಪಂಚಾಯತ ರಾಜ್ಯ ಇಲಾಖೆಯಲ್ಲಿ ಪ್ರಗತಿಪರ ಕಾರ್ಯಕ್ರಮಗಳು ಮಾಡುತ್ತಿರುವ ಖರ್ಗೆಯವರ ಏಳಿಗೆಯನ್ನು ಸಹಿಸಕ್ಕಾಗದೇ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಹೊರೆಸುವ ಕೆಲಸಕ್ಕೆ ಕೈಹಾಕಿರುವದಲ್ಲದೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವು ಸಂವಿಧಾನದ ಮೂಲಕ ಆಡಳಿತ ನಡೆಸುತ್ತೇವೆ ಎನ್ನುವ ಕೇಂದ್ರ ಸರಕಾರದ ಸಚಿವ ಅಮಿತ್ ಶಾ ಅವರು ಡಾ. ಅಂಬೇಡ್ಕರರ ತತ್ವಗಳನ್ನು ಧಿಕ್ಕರಿಸಿ ಸಂವಿಧಾನಕ್ಕೆ ಅವಮಾನ ಮಾಡುತ್ತಿದೆ ಅಲ್ಲದೆ ರಾಜ್ಯದ ಒಬ್ಬ ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಅವಮಾನಿಸಿ ಜೈಲು ಸೇರಿದ ಮಾಜಿ ಸಚಿವ ಸಿ.ಟಿ.ರವಿ ಅವರು ಹೊರ ಬಂದ ತಕ್ಷಣ ವಿಜಯೋತ್ಸವ ಆಚರಿಸಿ ಅವರ ಯೋಗ್ಯತೆಯನ್ನು ಹೊರ ಹಾಕಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವು ಕಿಂಚಿತ್ತಿಲ್ಲ. ಆದಾಗ್ಯೂ ಅವರ ಆಡಳಿತ ಸಹಿಸಲಿಕ್ಕಾಗದೆ ವಿನಾಕಾರಣ ಗುಲ್ಲೆಬ್ಬಿಸುತ್ತಿದ್ದಾರೆ. ಶಾಸಕ ಮಣಿಕಂಠ ರಾಠೋಡ ಅವರ ಮೇಲೆ ೩೦ ಕೇಸ್‌ಗಳಿಗೆ ಅಂತವರು ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ದಲಿತ ಜನಾಂಗಕ್ಕೆ ಸೇರಿದ ನಾಯಕ ಸಚಿವ ಪ್ರಿಯಾಂಕ ಖರ್ಗೆ ಯವರ ಮೇಲೆ ಬಿಜೆಪಿ ಏಜಂಟರಾಗಿ ಕಾರ್ಯನಿರ್ವಹಿಸುತ್ತಿರುವ ಚಲವಾದಿ ನಾರಾಯಣಸ್ವಾಮಿ ಯವರು ದೊಂಬಿ ಮಾಡುವ ಮೂಲಕ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ದಲಿತ ಸಂಘರ್ಷ ಸಮಿತಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಮುಂದಿನ ದಿನಮಾನದಲ್ಲಿ ಇಡೀ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರ, ಓಬಿಸಿ ನಾಯಕ ಎಂ.ಎ.ಖತೀಬ, ರಮೇಶ ನಡುವಿನಕೇರಿ ಇದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group