ಬೀದರ – ನಮ್ಮ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಇದ್ದುಕೊಂಡೇ ಏನೂ ಮಾಡಲು ಆಗೋದಿಲ್ಲ ಇನ್ನು ಸಿಂಗಾಪುರಕ್ಕೆ ಹೋಗಿ ಏನು ಮಾಡಲು ಸಾಧ್ಯ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಸ್ ಮತ್ತು ಬಿಜೆಪಿ ಪಕ್ಷ ಮೈತ್ರಿ ಒಂದು ಅನೈತಿಕ ಸಂಬಂಧ ಎಂದು ವ್ಯಂಗ್ಯ ಮಾಡಿದರು. ಕೋಮುವಾದಿಗಳ ಜೊತೆ ಹೋದರೆ ನಮ್ಮ ಜನ ಬರುವ ಲೋಕಸಭಾ ಚುನಾವಣೆಯಲ್ಲಿ ತೀಮಾ೯ನ ಕೊಡುತ್ತಾರೆ ಜೆಡಿಎಸ್ ಗೆ ಟಾಂಗ್ ನೀಡಿದರು.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಸಿಂಗಾಪುರ ಪ್ರಯಾಣ ವಿಚಾರದ ಬಗ್ಗೆ ಮಾತಾನಾಡಿದ ಅವರು, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬ ತತ್ವದಂತೆ ಕುಮಾರಸ್ವಾಮಿ ತಂತ್ರಕ್ಕೆ ನಮ್ಮ ಡಿಕೆ ಶಿವಕುಮಾರ ಪ್ರತಿ ತಂತ್ರ ಹೂಡಿದ್ದಾರೆ. ಈ ಸರ್ಕಾರವನ್ನು ಐದು ವರ್ಷ ಏನೂ ಮಾಡಲಾಗುವುದಿಲ್ಲ ಎಂದರು.
ನಾವು ೧೩೬ ಎಲ್ಲಾ ಶಾಸಕರು ಒಂದಾಗಿ ಇದ್ದೇವೆ. ಕಿರಿಯ ಸಚಿವರಿಗೆ ಅನುಭವ ಕೊರತೆ ಇರಬಹುದು ಆದರೆ ನಾವು ಎಲ್ಲರೂ ತಿದ್ದುಪಡಿ ಮಾಡಿಕೊಂಡು ಐದು ವರ್ಷ ಕಾಲ ಸುಭದ್ರ ಆಡಳಿತವನ್ನು ರಾಜ್ಯದ ಜನರಿಗೆ ನೀಡುತ್ತೇವೆ. ಹಿಂದಿನ ಸರಕಾರ ಭ್ರಷ್ಟಾಚಾರದ ಆಡಳಿತ ಮಾಡಿದೆ.
ಸಿದ್ದರಾಮಯ್ಯ ಸರಕಾರ ರಾಜ್ಯ ಜನರಿಗೆ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಲಿದೆ ಎಂದು ಸಚಿವ ನಾಗೇಂದ್ರ ಬೀದರ ಪ್ರವಾಸದ ಸಂದರ್ಭದಲ್ಲಿ ಹೇಳಿದರು.
ವರದಿ: ನಂದಕುಮಾರ ಕರಂಜೆ, ಬೀದರ