ಬೀದರ -ರಸ್ತೆಯ ಎಲ್ಲಾ ಗುಂಡಿಗಳನ್ನು ಮುಚ್ಚುವುದಕ್ಕೆ ಆಗಲ್ಲ. ಹೌದು, ಜನರಿಗೆ ಸಮಸ್ಯೆ ಆಗ್ತಿದೆ ಒಪ್ಪಿಕೊಳ್ಳುತ್ತೇವೆ. ರಸ್ತೆ ಗುಂಡಿ ಬಗ್ಗೆ ಉದ್ಯಮಿ ಕಿರಣ್ ಮಜುಂದಾರ್ ಪೋಸ್ಟ್ ಮಾಡಿದ್ದಾರೆ ಅವರಿಗೆ ಕೇಂದ್ರ ಸರ್ಕಾರದ ಬಗ್ಗೆಯೂ ಬರೆಯಲು ಹೇಳಿ ಎಂದು ಲಾಡ್ ಪ್ರತಿಕ್ರಿಯೆ ನೀಡಿದರು.
ಉದ್ಯಮಿ ಕಿರಣ್ ಮಜುಂದಾರ್ ರಸ್ತೆಯ ಗುಂಡಿಗಳ ಬಗ್ಗೆ ಮಾಡಿದ್ದ ಟ್ವೀಟ್ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆ ಸಚಿವ ಲಾಡ್ ಗರಂ ಆದರು
ನೀವು ನಾಳೆ ಮುಖ್ಯಮಂತ್ರಿಯಾದರೆ ಎಲ್ಲರ ಮನೆಗೆ ಬಂಗಾರದ ತಟ್ಟೆ ಬರಲ್ಲ ಎಂದು ಲೇವಡಿ ಮಾಡಿದರು.
ಕಿರಣ್ ಮಜುಂದಾರ್ ನಮ್ಮ ವಿರುದ್ಧ ಮಾತನಾಡಿದ್ದಾರೆ ನಾನೂ ಅದನ್ನು ಸ್ವಾಗತಿಸುತ್ತೇನೆ. ಸಮಸ್ಯೆ ಇದೆ ಹೇಳಿದ್ದಾರೆ ಬಗೆಹರಿಸ್ತೀವಿ. ಅದೇ ರೀತಿ ಕೇಂದ್ರ ಸರ್ಕಾರದ ವಿರುದ್ಧವೂ ಟ್ವೀಟ್ ಮಾಡೋಕೆ ಹೇಳಿ ಅವರಿಗೆ. ಕಿರಣ್ ಮಜುಂದಾರ್ GST ಬಗ್ಗೆ ಯಾಕೆ ಮಾತಾಡಲ್ಲ..?
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದಕ್ಕೆ ಹೆದರುತ್ತಾರೆ. ನಮ್ಮ ಸರ್ಕಾರದ ವಿರುದ್ಧ ಮಾತನಾಡಲಿ, ನಮಗೆ ಹೆಮ್ಮೆ ಇದೆ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ನಡೆಯುತ್ತದೆ ಎಂದರು.
ನಮ್ಮ ಸರ್ಕಾರದ ವಿರುದ್ಧ ಮಾತನಾಡಿದ ಹಾಗೆ, ಕೇಂದ್ರ ಸರ್ಕಾರದ ವಿರುದ್ಧ ಉದ್ಯಮಿಗಳು ಮಾತನಾಡುತ್ತಾರಾ ?ಮೋದಿ ಸಾಹೇಬರು ತುಂಬಾ ಬೆಳೆದಿದ್ದಾರೆ, ಅವರ ಪಕ್ಷದಲ್ಲಿ ಅವರಿಗೆ ಯಾರೂ ಪ್ರಶ್ನೆ ಮಾಡಲ್ಲ ಎಂದು ಬೀದರ್‌ನಲ್ಲಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದರು.
ವರದಿ : ನಂದಕುಮಾರ ಕರಂಜೆ, ಬೀದರ

