spot_img
spot_img

ರಾಮಾಯಣ ಓದುವ ಕಾಲ ಈಗ !!

Must Read

- Advertisement -

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಭಾರತೀಯರೆಲ್ಲರ ಶತಮಾನಗಳ ಕನಸು. ಅದೀಗ, ಎಲ್ಲ ಅಡೆತಡೆಗಳನ್ನೂ ದಾಟಿ, ಸಾಕಾರಗೊಳ್ಳುತ್ತಿದೆ! ಅದಕ್ಕಾಗಿ, ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವೂ ಅಳಿಲುಸೇವೆ ಸಲ್ಲಿಸಿದ್ದೇವೆ. ಅಲ್ಲಿಗೆ ಮುಗಿಯಿತೇ?

ಶ್ರೀರಾಮನಿಗಾಗಿ ಭವ್ಯ ಮಂದಿರ ತಲೆಯೆತ್ತಿ ನಿಲ್ಲುವಷ್ಟರಲ್ಲಿ ನಾವು ಒಂದುಬಾರಿಯಾದರೂ ರಾಮಾಯಣವನ್ನು ಓದದಿದ್ದರೆ ಏನು ಪ್ರಯೋಜನ?

- Advertisement -

ನಮ್ಮ ಮನೆಯಲ್ಲಿ ಒಂದಾದರೂ ರಾಮಾಯಣಕೃತಿ ಇಲ್ಲವೆಂದರೆ ಹೇಗೆ?

ಕನ್ನಡದಲ್ಲೀಗ ಅಪರೂಪದ ರಾಮಾಯಣಕೃತಿಗಳು ಮತ್ತೆ ಮರುಮುದ್ರಣಗೊಂಡಿವೆ.

  1. ೧೯೯೦ ರ ದಶಕದಲ್ಲಿ ಮೈಸೂರು ಅರಮನೆಯಿಂದ ಪ್ರಕಟವಾಗಿದ್ದ, ೧೯೬೭ ರಲ್ಲಿ ವಿ. ರಂಗನಾಥಶರ್ಮರು ಸಂಪಾದಿಸಿದ್ದ *ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ* ಇದೀಗ ಮತ್ತೆ ದೊರೆಯುತ್ತಿದೆ!
  2. ಒಂದು ಪೀಳಿಗೆಯನ್ನು ಕನ್ನಡ ಓದು-ಬರವಣಿಗೆಯ ಕಡೆಗೆ ಆಕರ್ಷಿಸಿದ ಸುಬೋಧ ರಾಮರಾಯರ ಶ್ರೀರಾಮಾಯಣ ಕಥಾಸಾರ* ಮರುಮುದ್ರಣಗೊಂಡಿದೆ!
  3. ಒಂದುಕಾಲದಲ್ಲಿ ‘ರಾಜಾಜಿ ರಾಮಾಯಣ’ವೆಂದೇ ಪ್ರಸಿದ್ಧವಾಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರ ಶ್ರೀರಾಮನ ದಿವ್ಯಕಥೆ (ಅನು: ಕೆ. ಸಂಪದ್ಗಿರಿರಾಯರು) ೬೩ ವರ್ಷಗಳ ನಂತರ, ಚಿತ್ರಗಳೊಂದಿಗೆ ಮರುಮುದ್ರಣಗೊಂಡಿದೆ!

- Advertisement -

ಸರಳ ಭಾಷೆ, ಸುಲಲಿತ ಶೈಲಿಯಲ್ಲಿರುವ ಈ ಮೂರೂ ಕೃತಿಗಳೂ ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಓದಬಹುದಾದಂಥವು. ಇವುಗಳಲ್ಲಿ ಒಂದು ಪುಸ್ತಕವಾದರೂ ನಮ್ಮ ಮನೆಯಲ್ಲಿದ್ದರೆ, ಒಂದು ಪುಸ್ತಕವನ್ನಾದರೂ ನಾವು ಓದಲು ಸಾಧ್ಯವಾದರೆ, ಅಷ್ಟುಮಟ್ಟಿಗೆ ನಾವು ನಮ್ಮನ್ನು ನಮ್ಮ ಭವ್ಯ ಪರಂಪರೆಯೊಂದಿಗೆ ಜೋಡಿಸಿಕೊಂಡಂತೆ! ನಮ್ಮ ಸಾಂಸ್ಕೃತಿಕ ಸ್ವಾತಂತ್ರ್ಯದ ಕಡೆಗೆ ನಾವು ಒಂದು ಹೆಜ್ಜೆ ಇಟ್ಟಂತೆ!


ಈ ರಾಮಾಯಣಕೃತಿಗಳನ್ನು ಖರೀದಿಸಲು, ನಿಮ್ಮ ಪರಿಚಿತರಿಗೆ ಆಪ್ತರಿಗೆ ಉಡುಗೊರೆಯಾಗಿ ಕಳಿಸಲು WhatsApp ಮಾಡಿ: 7483681708

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group