Homeಸುದ್ದಿಗಳುಪ್ರಾಮಾಣಿಕ ಬದ್ಧತೆ ಮೂಲಕ ಗಿಡಗಳನ್ನು ಪೋಷಿಸಿ - ಆನಂದ ಮಾಮನಿ

ಪ್ರಾಮಾಣಿಕ ಬದ್ಧತೆ ಮೂಲಕ ಗಿಡಗಳನ್ನು ಪೋಷಿಸಿ – ಆನಂದ ಮಾಮನಿ

ಸವದತ್ತಿ: ಭೂಮಿಯಲ್ಲಿ ತೇವಾಂಶವಿದ್ದು ಸರಿಯಾದ ರಕ್ಷಣೆ– ಪೋಷಣೆ ನೀಡಿದರೆ ಸಸಿಗಳು ಉಳಿದು ಬೆಳೆಯುತ್ತವೆ. ಇದಕ್ಕೆ ಪ್ರಾಮಾಣಿಕ ಬದ್ಧತೆ ಬೇಕು.ವನಮಹೋತ್ಸವ ಒಂದು ದಿನಕ್ಕೆ ಸೀಮಿತವಾಗದೆ. ನಾವು ನೆಟ್ಟ ಗಿಡಗಳನ್ನೆಲ್ಲ ಸರಿಯಾಗಿ ಪೋಷಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸುವ ಮೂಲಕ ಈ ದಿನದ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ವಿಧಾನಸಭಾ ಉಪ ಸಭಾಧ್ಯಕ್ಷ ರು ಹಾಗೂ ಸವದತ್ತಿಯ ಜನಪ್ರಿಯ ಶಾಸಕರಾದ ಆನಂದ ಚಂದ್ರಶೇಖರ ಮಾಮನಿ ತಿಳಿಸಿದರು.

ಅವರು ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ (ದ) ತಾಲೂಕ ಪಂಚಾಯತಿ ಸವದತ್ತಿ,ಸರಕಾರಿ ಪ್ರೌಢ ಶಾಲೆ ಸವದತ್ತಿ, ಶ್ರೀ ಯಲ್ಲಮ್ಮ ಪುರಸಭೆ ಸವದತ್ತಿ ಹಾಗೂ ಸಾಮಾಜಿಕ ಅರಣ್ಯ ವಲಯ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ವನಮಹೋತ್ಸವ ಕಾರ್ಯಕ್ರಮವನ್ನು “ಸಸಿ ನೆಟ್ಟು ನೀರುಣಿಸುವುದರ” ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಾದ ಎಸ್.ಎಸ್.ಮಲ್ಲೇಶನವರ, ವಕೀಲರಾದ ಸಿ.ಬಿ.ದೊಡಗೌಡ್ರ , ಮಹಾಂತೇಶ.ಶಿಂತ್ರಿ, ಮಂಜುನಾಥ ನಿಕ್ಕಂ, ತಾಲೂಕ ತಹಶಿಲ್ದಾರರಾದ ಪ್ರಶಾಂತ ಪಾಟೀಲ, ಸಾಮಾಜಿಕ ಮತ್ತು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳಾದ ಲಿಂಗರಡ್ಡಿ ಮಂಕಣಿ, ಐ.ಎಸ್.ಇಟ್ನಾಳ, ಸವದತ್ತಿ ಯಲ್ಲಮ್ಮ ಪುರಸಭೆ ಮುಖ್ಯಾಧಿಕಾರಿಗಳಾದ ಪಿ.ಎಮ್. ಚನ್ನಪ್ಪನವರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ.ಚ. ಕರಿಕಟ್ಟಿ ,ಪಿ.ಡಬ್ಲ್ಯು.ಡಿ.ಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಕದ್ರಾಪೂರ, ತಾಲೂಕಾ ಆರೋಗ್ಯ ಅಧಿಕಾರಿಗಳಾದ ಮಹೇಶ.ಚಿತ್ತರಗಿ , ಶಾಲೆಯ ಉಪಪ್ರಾಚಾರ್ಯರು ಮತ್ತು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕದ, ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘ ತಾಲೂಕ ಘಟಕ ಸವದತ್ತಿ ಅಧ್ಯಕ್ಷರಾದ ಹೆಚ್.ಆರ್.ಪೆಟ್ಲೂರ, ಪ್ರಧಾನ ಕಾರ್ಯದರ್ಶಿಗಳಾದ, ಎಫ್ ಜಿ. ನವಲಗುಂದ, ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆ ಮುಖ್ಯೋಪಾಯರಾದ ಮಂಜುನಾಥ ಕಮ್ಮಾರ, ಭೀಮಣ್ಣ ಕೊಕಟನೂರ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಗಳಾದ ಬಿ. ಎನ್. ಹೊಸೂರ ಶಾಲಾ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

RELATED ARTICLES

Most Popular

error: Content is protected !!
Join WhatsApp Group