ಸಿಂದಗಿ : ಜಿ.ಪಿ ಪೋರವಾಲ ಕಲಾ ವಾಣಿಜ್ಯ ಮತ್ತು ವಿ.ವಿ ಸಾಲಿಮಠ ವಿಜ್ಞಾನ ಮಹಾವಿದ್ಯಾಲಯ ಸಿಂದಗಿಯಲ್ಲಿ ಎನ್.ಎಸ್.ಎಸ್, ಎನ್.ಸಿ.ಸಿ, ವೈ ಆರ್ ಸಿ, ಸ್ಪೋರ್ಟ್ಸ್ ಮತ್ತು ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಘಟಕದ ಆಶ್ರಯದಲ್ಲಿ ಹರ ಘರ್ ತಿರಂಗ ಅಭಿಯಾನದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧ ಕಾರ್ಯಕ್ರಮ ಅಧಿಕಾರಿಗಳು ಡಾ. ಶ್ರೀಕಾಂತ್ ಎಲ್. ಪಾಟೀಲ್ ಪ್ರತಿಜ್ಞಾ ಬೋಧನೆ ಮಾಡಿದರು.
“ಹರ್ ಘರ್ ತಿರಂಗ” ಅಭಿಯಾನದಲ್ಲಿ “ನಾನು ತ್ರಿವರ್ಣ ಧ್ವಜವನ್ನು ಹಾರಿಸುತ್ತೇನೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರ ಪುತ್ರರ ಆತ್ಮವನ್ನು ಗೌರವಿಸುತ್ತೇನೆ ಮತ್ತು ಭಾರತದ ಅಭಿವೃದ್ಧಿ ಮತ್ತು ಪ್ರಗತಿಗೆ ನನ್ನನ್ನು ಅರ್ಪಿಸುತ್ತೇನೆ ಎಂದು ಪ್ರತಿಜ್ಞೆ ಬೋಧನೆ ಮಾಡಿದ್ದಾರೆ
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಪ್ರೊ. ಡಿ.ಎಂ. ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟಿರುತ್ತಾರೆ. ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಕಾಲೇಜಿನ ಮುಖಾಂತರ ನಡೆದುಕೊಂಡು ಬಸವೇಶ್ವರ ಸರ್ಕಲ್ ಮುಖಾಂತರವಾಗಿ ಜಾಥಾವನ್ನ ಧ್ವಜವನ್ನು ಹಿಡಿಯುವುದರ ಮುಖಾಂತರವಾಗಿ ಜನರಿಗೆ ಮತ್ತು ಸಮಾಜಕ್ಕೆ ತಿಳಿಸಿ ಕೊಡುವುದಕ್ಕಾಗಿ ಕಾರ್ಯಕ್ರಮವನ್ನ ಮಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕರಾದ ಡಾ. ರವಿ ಗೋಲಾ ಎನ್. ಸಿ.ಸಿ. ಆಫೀಸರ್ ಡಾ. ರವಿ ಲಮಾಣಿ, ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಪ್ರೊ. ಬಸವರಾಜ್ ಮಹಾಜನ್ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೨ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ವಿ.ಎ. ಪಾಂಡೆ, ಮತ್ತು ಎಲ್ಲ ಸಿಬ್ಬಂದಿ ವರ್ಗದವರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.

